ಕೀವ್, ಏ 17 (DaijiworldNews/DB): ಮರಿಯುಪೋಲ್ ನಗರವನ್ನು ಸಂಪೂರ್ಣ ನಾಶ ಮಾಡಲು ರಷ್ಯಾ ಯತ್ನಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.
ಮರಿಯಪೋಲ್ನ ಸ್ಥಿತಿ ಬಗ್ಗೆ ಶನಿವಾರ ಮಾತನಾಡಿರುವ ಅವರು, ಉಕ್ರೇನ್ನ ಬಂದರು ನಗರಿ ಮರಿಯಪೋಲ್ನಲ್ಲಿ ರಷ್ಯಾ ಸೇನೆ ಮುತ್ತಿಗೆ ಹಾಕಿ ಹಲವಾರು ಸ್ವತ್ತುಗಳನ್ನು ಧ್ವಂಸಗೊಳಿಸಿದೆ. ಅಲ್ಲಿನ ಪರಿಸ್ಥಿತಿ ಈಗ ಗಂಭೀರವಾಗಿದೆ. ನಮ್ಮ ರಕ್ಷಣಾ ಪಡೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿನ ಎಲ್ಲಾ ಮಾಹಿತಿಗಳನ್ನು ಪಡೆಯಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಮರಿಯುಪೋಲ್ನಿಂದ ಉಕ್ರೇನ್ ಸೈನಿಕರನ್ನು ಹೊರಹಾಕಲಾಗಿದ್ದು, ಮರಿಯಪೋಲ್ ಪ್ರದೇಶವನ್ನು ಸಂಪೂರ್ಣವಾಗಿ ನಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಷ್ಯಾ ಈ ಹಿಂದೆ ಹೇಳಿತ್ತು. ಆದರೆ ಈ ಬಗ್ಗೆಉಕ್ರೇನ್ ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.