ನವದೆಹಲಿ, ಏ 18 (DaijiworldNews/HR): ಹಾಂಗ್ ಕಾಂಗ್ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮೂವರು ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಏಪ್ರಿಲ್ 24 ರವರೆಗೆ ಏರ್ ಇಂಡಿಯಾ ಸೇವೆಗಳನ್ನು ಹಾಂಗ್ ಕಾಂಗ್ ಸರ್ಕಾರ ನಿಷೇಧಿಸಿದೆ.
ಪ್ರಯಾಣಕ್ಕೆ 48 ಗಂಟೆಗಳ ಮೊದಲು ಮಾಡಿದ ಪರೀಕ್ಷೆಯಿಂದ ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರ ಭಾರತದ ಪ್ರಯಾಣಿಕರು ಹಾಂಗ್ ಕಾಂಗ್ಗೆ ಬರಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಂಗ್ ಕಾಂಗ್ನ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನದ ನಂತರದ ಕೊರೊನಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕೊರೊನಾ ರೋಗದಿಂದ ಎರಡು ವರ್ಷಗಳ ವಿರಾಮದ ನಂತರ ಮಾರ್ಚ್ 27 ರಂದು ಭಾರತದಲ್ಲಿ ನಿಯಮಿತ ಅಂತರಾಷ್ಟ್ರೀಯ ವಿಮಾನಗಳು ಪುನರಾರಂಭಗೊಂಡಿದೆ.