ಇಸ್ಲಾಮಾಬಾದ್, ಏ 23 (DaijiworldNews/DB): ಪಾಕಿಸ್ತಾನದ ಸೇನಾ ಪೋಸ್ಟ್ ಮೇಲೆ ಅಪ್ಘಾನ್ ಉಗ್ರರು ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಮೂವರು ಸಿಬಂದಿ ಹತರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಕಳೆದ ರಾತ್ರಿ ಅಫ್ಘಾನಿಸ್ತಾನದ ಉಗ್ರರು ಪಾಕಿಸ್ತಾನದ ಉತ್ತರ ವಜೀರಿಸ್ತಾನ್ ಪ್ರದೇಶದಲ್ಲಿನ ಸೇನಾ ಪೋಸ್ಟ್ನಲ್ಲಿ ಶೆಲ್ ದಾಳಿ ನಡೆಸಿದ್ದರು. ಇದರಲ್ಲಿ ಮೂವರು ಹತ್ಯೆಯಾಗಿದೆ. ಇನ್ನೂ ಕೆಲವು ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಸೇನೆ ಹೇಳಿದೆ.
ಅಫ್ಘಾನ್ನಲ್ಲಿ ಇತ್ತೀಚೆಗೆ ಅನೇಕ ಸ್ಪೋಟಗಳು ನಡೆದ ಬೆನ್ನಲ್ಲೇ ಪಾಕ್ನಲ್ಲಿ ಈ ದಾಳಿ ನಡೆದಿದೆ. ಅಪ್ಘಾನ್ನಲ್ಲಿ ನಡೆದ ಬಹುತೇಕ ದಾಳಿಗಳು ಅಲ್ಪಸಂಖ್ಯಾತ ಶಿಯಾ ಸಮುದಾಯವನ್ನು ಗುರಿಯಾಗಿರಿಸಿಕೊಂಡು ನಡೆದುದಾಗಿದೆ.