ಕೀವ್, ಏ 24 (DaijiworldNews/DB): ರಷ್ಯಾ ದಾಳಿಯಿಂದಾಗಿ ಉಕ್ರೇನ್ನಲ್ಲಿ ಮೂರು ತಿಂಗಳ ಶಿಶುವೊಂದು ಅಸುನೀಗಿದೆ. ಶಿಶುವಿನ ಸಾವಿಗೆ ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಕಂಬನಿ ಮಿಡಿದಿದ್ದಾರೆ.
ಉಕ್ರೇನ್ನ ಕಪ್ಪು ಸಮುದ್ರದ ಬಂದರು ನಗರವಾದ ಒಡೆಸಾದಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಿದ ಪರಿಣಾಮವಾಗಿ ಎಂಟು ಜನರು ಸಾವನ್ನಪ್ಪಿದ್ದಾರೆ. ಈ ಎಂಟು ಮಂದಿಯ ಪೈಕಿ ಮೂರು ತಿಂಗಳ ಶಿಶು ಕೂಡಾ ಸೇರಿದೆ. ಇನ್ನೂ ಪ್ರಪಂಚವನ್ನು ಕಣ್ತೆರೆದು ನೋಡುವುದಕ್ಕೆ ಮುನ್ನವೇ ಕಂದಮ್ಮ ಅಸುನೀಗಿರುವುದಕ್ಕೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದೆ. ಮಿಲಿಟರಿ ಸೌಲಭ್ಯ ಮತ್ತು ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಇಲ್ಲಿ ದಾಳಿ ನಡೆಸಿದ್ದವು ಎಂಬುದಾಗಿ ಉಕ್ರೇನ್ ಸಶಸ್ತ್ರ ಪಡೆಗಳು ಅಂದಾಜಿಸಿದ್ದಾರೆ. ದಾಳಿಯಲ್ಲಿ18 ಜನರು ಗಾಯಗೊಂಡಿದ್ದಾರೆ.
ಅಮಾನುಷವಾಗಿ ಉಕ್ರೇನ್ ಜನರನ್ನು ಕೊಂದು ಹಾಕುತ್ತಿರುವ ರಷ್ಯಾದ ಮಿಲಿಟರಿಯ ವಿರುದ್ಧ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಕಿಡಿ ಕಾರಿದ್ದಾರೆ.