ದೋಹಾ, ಏ 26 (DaijiworldNews/MS): ಕೆಸಿಎಫ್ ಕತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ಇಫ್ತಾರ್ ಸಂಗಮವು ಏ.23ರಂದು ಸ್ವಾಗತ ಸಮಿತಿ ಚೇರ್ಮಾನ್ ಇಸ್ಹಾಕ್ ನಿಝಾಮಿಯವರ ಅಧ್ಯಕ್ಷತೆಯಲ್ಲಿ ದೋಹಾದಲ್ಲಿ ನಡೆಯಿತು. ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಹಾಗೂ ಆಸಿಫ್ ಅಹ್ಸನಿ ಅಲ್' ಅನ್ವಾರಿಯವರ ನೇತೃತ್ವದಲ್ಲಿ ನಡೆದ ಮಹ್'ಳರತುಲ್ ಬದ್ರಿಯಾ ಮಜ್ಲಿಸ್ ಮೂಲಕ ಚಾಲನೆಗೊಂಡ ಈ ಕಾರ್ಯಕ್ರಮವನ್ನು ಐಸಿಎಫ್ ಕತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ಬಶೀರ್ ಪುತ್ತುಪಾಡಮ್ ರವರು ಉದ್ಘಾಟಿಸಿದರು. ಪ್ರಮುಖ ಅತಿಥಿಯಾಗಿ ಆಗಮಿಸಿರುವ ಬಹುl ಅಸ್ಸಯ್ಯಿದ್ ನಿಝಾಮುದ್ದೀನ್ ಬಾಫಖೀ ತಂಙಳ್ ರವರು ದುಆ ನೆರವೇರಿಸಿಕೊಟ್ಟರು.
ಐಸಿಎಫ್ ಹಾಗೂ ಆರ್ ಎಸ್ ಸಿ ಮುಂತಾದ ಕೆಸಿಎಫ್ ನ ಸಹೋದರ ಸಂಘಟನೆಗಳ, ಕತ್ತರ್ ರಾಷ್ಟ್ರೀಯ ನೇತಾರರುಗಳ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದಆರ್ ಎಸ್ ಸಿ ರಾಷ್ಟ್ರೀಯ ಸಮಿತಿ ದ'ಅ್'ವಾ ವಿಭಾಗದ ಚೇರ್ಮಾನ್, ಅಹ್ಮದ್ ಸಖಾಫಿ ಪೇರಾಂಬ್ರ, ಆರ್ ಎಸ್ ಸಿ ರಾಷ್ಟ್ರೀಯ ಸಮಿತಿ ಪಬ್ಲಿಶಿಂಗ್ ವಿಭಾಗದ ಕನ್ವೀನರ್ ನೌಷಾದ್ ಸಾಹಿಬ್ ಅದಿರುಮಡ, ಆರ್ ಎಸ್ ಸಿ ರಾಷ್ಟ್ರೀಯ ಸಮಿತಿ ಕನ್ವೀನರ್ ಮೊಹಮ್ಮದ್ ಶಫೀಖ್ ಕನ್ನಪುರಂ ರವರುಗಳು ಮಾತನಾಡಿ, ಬೃಹತ್ತಾದ ಈ ಇಫ್ತಾರ್ ಸಂಗಮದಲ್ಲಿ ಸೇರಿರುವ ಕಾರ್ಯಕರ್ತರನ್ನು ಅಭಿನಂದಿಸಿದರು.
ಎಸ್ ಎಸ್ ಎಫ್ ಸಹಯೋಗದೊಂದಿಗೆ ಉತ್ತರ ಕರ್ನಾಟಕದಾದ್ಯಂತ ಕೆಸಿಎಫ್ .ನಡೆಸುತ್ತಿರುವ ದೀನೀ ಕಾರ್ಯಚಟುವಟಿಕೆಗಳ ಬಗ್ಗೆ ಕಿರು ಡಾಕ್ಯುಮೆಂಟರಿ ವೀಡಿಯೋವೊಂದನ್ನು ಪ್ರದರ್ಶಿಸಿ, ಕಡುಬಡತನದೊಂದಿಗೆ, ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳಿಂದ ವಂಚಿತರಾಗಿದ್ದ ಸಮಾಜವೊಂದನ್ನು ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸುತ್ತಾ ಕ್ರಾಂತಿಕಾರಿಯಾಗಿ ಕಾರ್ಯಾಚರಿಸುತ್ತಿರುವ ಕೆಸಿಎಫ್ ನ ಕಾರ್ಯವೈಖರಿಗಳ ಬಗ್ಗೆ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ನಾಯಕರಾಗಿರುವ ಹಾಫಿಲ್ ಉಮರುಲ್ ಫಾರೂಖ್ ಸಖಾಫಿಯವರು ವಿವರಣೆಯನ್ನು ನೀಡಿದರು.
ವೇದಿಕೆಯಲ್ಲಿ, ಕೆಸಿಎಫ್ ಕತ್ತರ್ ರಾಷ್ಟ್ರೀಯ ಸಮಿತಿ ನೇತಾರರುಗಳಾದ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ, ಇಹ್ಸಾನ್ ವಿಭಾಗದ ಚೇರ್ಮಾನ್ ಮುನೀರ್ ಮಾಗುಂಡಿ, ಸಂಘಟನಾ ವಿಭಾಗದ ಚೇರ್ಮಾನ್ ಹನೀಫ್ ಪಾತೂರು, ಶಿಕ್ಷಣ ವಿಭಾಗದ ಚೇರ್ಮಾನ್ ಸತ್ತಾರ್ ಅಶ್ರಫಿ ಮಠ, ಸಯ್ಯಿದ್ ಅರ್ಷದ್ ಅಲಿ ತಂಙಳ್ ರವರುಗಳು ಉಪಸ್ಥಿತರಿದ್ದರು. ಹಸನ್ ಪೂಂಜಾಲ್ ಕಟ್ಟೆ, ಸಿದ್ದೀಖ್ ಕೃಷ್ಣಾಪುರ, ಫಾರೂಖ್ ಕೃಷ್ಣಾಪುರ, ಮಿರ್ಶಾದ್ ಕನ್ಯಾನ, ಅಶ್ರಫ್ ಕಾವಳ್'ಕಟ್ಟೆ, ಇಸ್ಮಾಯಿಲ್ ಉಪ್ಪಳ್ಳಿ ಮುಂತಾದ ಕೆಸಿಎಫ್ ರಾಷ್ಟ್ರೀಯ ಸಮಿತಿ ನಾಯಕರುಗಳು, ಇಫ್ತಾರ್ ವ್ಯವಸ್ಥೆಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯಾಚರಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾಗಿತ್ತು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿಯವರು ಸ್ವಾಗತಿಸಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಇಫ್ತಾರ್ ಸಂಗಮ ಸ್ವಾಗತ ಸಮಿತಿ ಕನ್ವೀನರ್ ಆಗಿದ್ದ ಬಶೀರ್ ಉಪ್ಪಳ್ಳಿಯವರು ಧನ್ಯವಾದ ಹೇಳಿದರು.