ಮೆಕ್ಸಿಕೋ, ಏ 27 (DaijiworldNews/HR): 6 ವರ್ಷದ ಬಾಲಕನೊಬ್ಬ ಮಾನ್ಸ್ಟರ್ ಎನರ್ಜಿ ಡ್ರಿಂಕ್ಸ್ ಕುಡಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದ ಮ್ಯಾಟಮೊರೊಸ್ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಫ್ರಾನ್ಸಿಸ್ಕೊ ಸರ್ವಾಂಟೆಸ್(6) ಎಂದು ಗುರುತಿಸಲಾಗಿದೆ.
ಬಾಲಕ ತನ್ನ ಬಾಯಾರಿಕೆಯನ್ನು ನೀಗಿಸಲು ಮಾನ್ಸ್ಟರ್ ಎನರ್ಜಿ ಡ್ರಿಂಕ್ ಅನ್ನು ಸೇವಿಸಿದ್ದು, ನಂತರ ಬಾಲಕ ಅಸ್ವಸ್ಥಗೊಂಡಿದ್ದಾಮೆ. ಇದನ್ನು ಗಮನಿಸಿದ ಮನೆಯವರು ಕೂಡಲೇ ಅವನ್ನು ಸ್ಥಳೀಯ ಆಲ್ಫ್ರೆಡೋ ಪುಮಾರೆಜೊ ಆಸ್ಪತ್ರೆಗೆ ಕರೆದೊಯ್ದರು.
ಇನ್ನು ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಈತ ಹೃದಯಾಘಾತದಿಂದ ಬಳಲುತ್ತಿದ್ದು, ಅವನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದ್ದಾರೆ. ಇದಾದ ನಂತರವೂ ಆರು ದಿನಗಳ ಕಾಲ ಕೋಮಾದಲ್ಲಿದ್ದು, ಕೊನೆಯುಸಿರೆಳೆದಿದ್ದಾನೆ.