ಸಿಂಗಾಪುರ, ಏ 28 (DaijiworldNews/DB): ಕೊರೊನಾ ಲಸಿಕೆ ಪಡೆದಿರುವ ಬಗ್ಗೆ ನಕಲಿ ದಾಖಲೆ ತೋರಿಸಿ ಬಾರ್ಗೆ ಪ್ರವೇಶಿಸಿದ ಭಾರತೀಯ ಮೂಲದ ಹಿರಿಯ ನಾಗರಿಕರೊಬ್ಬರು ಸಿಂಗಾಪುರದಲ್ಲಿ ಜೈಲು ಸೇರಿದ ಪ್ರಸಂಗ ನಡೆದಿದೆ.
ಉದಯಕುಮಾರ್ ನಲ್ಲತಂಬಿ (65) ಜೈಲು ಸೇರಿದ ವೃದ್ದ. ಕಳೆದ ವರ್ಷ ಕೊರೊನಾ ಹೆಚ್ಚಿದ್ದ ಸಂದರ್ಭ ಮಲೇಶಿಯಾ ಪ್ರಜೆಯಾಗಿರುವ ಭಾರತೀಯ ಮೂಲದ 37 ವರ್ಷದ ಕಿರಣ್ ಸಿಂಗ್ ರಘುಬಿರ್ ಸಿಂಗ್ ಅವರು ಲಸಿಕೆ ಪಡೆದ ದಾಖಲೆಯನ್ನು ತೋರಿಸಿ ಉದಯಕುಮಾರ್ ಬಾರ್ಗೆ ತೆರಳಿದ್ದರು. ಸುಳ್ಳು ದಾಖಲೆ ತೋರಿಸಿ ಪ್ರವೇಶ ಪಡೆದಿರುವುದು ಟ್ರೇಸ್ ಟುಗೆದರ್ ಆಪ್ನಲ್ಲಿ ದಾಖಲಾಗಿತ್ತು. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿದಾಗ ಸುಳ್ಳು ದಾಖಲೆ ತೋರಿಸಿ ಪ್ರವೇಶ ಪಡೆದಿರುವುದು ಸ್ಪಷ್ಟವಾಗಿತ್ತು. ತನ್ನ ದಾಖಲೆಯನ್ನು ಉದಯಕುಮಾರ್ಗೆ ನೀಡಿ ಸಹಕರಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕಿರಣ್ ಸಿಂಗ್ ರಘುಬಿರ್ ಸಿಂಗ್ ಅವರು 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.
ಕಳೆದ ಸೆಪ್ಟಂಬರ್ 9ರಂದು ಕಿರಣ್ ಸಿಂಗ್ ಅವರು ತಮ್ಮ ಗೆಳತಿಯೊಂದಿಗೆ ಸೆಂಟೊಸಾದ ಐಲೆಂಡ್ ರೆಸಾರ್ಟ್ಗೆ ಹೋಗಿದ್ದ ವೇಳೆ ಉದಯಕುಮಾರ್ ಭೇಟಿಯಾಗಿ, ಮೂವರೂ ಬಿಕಿನಿ ಬಾರ್ಗೆ ಹೋಗಲು ಮಾತುಕತೆ ನಡೆಸಿದ್ದರು. ಆದರೆ ಲಸಿಕೆ ಪಡೆಯದ ಕಾರಣ ಉದಯಕುಮಾರ್ಗೆ ಅಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು.
ಆದರೆ ಕಿರಣ್ ಸಿಂಗ್ ಅವರು ತನ್ನ ಟ್ರೇಸ್ ಟುಗೆದರ್ ಆಪ್ ಬಳಸಿ ಬೇರೆ ಬಾರ್ಗೆ ಪ್ರವೇಶ ಪಡೆಯುವಂತೆ ಹೇಳಿದ್ದ ಹಿನ್ನೆಲೆಯಲ್ಲಿ ಸಿಂಗ್ ಗೆಳತಿಯೊಂದಿಗೆ ಬೇರೆ ಬಾರ್ಗೆ ಹೋಗಿದ್ದಾರೆ. ಆದರೆ ಬೇರೆ ಬಾರ್ನಲ್ಲಿ ಮದ್ಯ ಕುಡಿಯುತ್ತಿರುವ ಉದಯಕುಮಾರ್ ಬಗ್ಗೆ ಬಿಕಿನಿ ಬಾರ್ ಸಹಾಯಕ ಮ್ಯಾನೇಜರ್ ಆಪ್ ಮೂಲಕ ತಿಳಿದುಕೊಂಡು ತತ್ಕ್ಷಣ ಆ ಬಾರ್ನವರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಇನ್ನೊಂದು ಬಾರ್ನವರು ವಿಚಾರಣೆ ನಡೆಸಿದಾಗ ಕಿರಣ್ಸಿಂಗ್ ಹೆಸರಲ್ಲಿ ಬಾರ್ ಪ್ರವೇಶ ಮಾಡಿರುವುದು ಖಚಿತವಾಗಿದೆ. ಹೀಗಾಗಿ ಬಾರ್ ಪ್ರವೇಶಿಸುವಂತೆ ಉದಯಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಒಪ್ಪಿದ ಉದಯಕುಮಾರ್ ಅವರು ಸಿಂಗ್ ಅವರ ಜೊತೆಗಿದ್ದ ಮಹಿಳೆಯ ಜೊತೆ ಬೇರೊಂದು ಬಾರ್ಗೆ ಹೋಗಿದ್ದಾರೆ. ಈ ವೇಳೆ ಸಿಂಗ್ ಹೊರಗೆ ಕಾದು ನಿಂತಿದ್ದಾರೆ. ತತ್ಕ್ಷಣ ಸೆಂಟೊಸಾ ಡೆವಲಪ್ಮೆಂಟ್ ಕಾರ್ಪೋರೇಷನ್ಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉದಯಕುಮಾರ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಬೇರೆಯವರ ಹೆಸರಿನಲ್ಲಿ ವಂಚನೆ ಎಸಗಿದರೆ ಸಿಂಗಾಪುರದಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.