ನ್ಯೂಯಾರ್ಕ್, ಏ 28 (DaijiworldNews/SM) : ಟ್ವಿಟರ್ ಸಂಸ್ಥೆಯನ್ನು ಅಮೆರಿಕಾದ ದೈತ್ಯ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ ಹಿನ್ನಲೆಯಲ್ಲಿ ದಿಗ್ಭ್ರಾಂತ ರಾಗಿರುವ ಟ್ವಿಟರ್ ಸಿಬಂದಿಗಳಿಗೆ ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಪರಾಗ್ ಅಗರ್ವಾಲ್ ಧೈರ್ಯ ತುಂಬಿದ್ದು, "ಸದ್ಯಕ್ಕೆ ನಿಶ್ಚಿಂತೆ ಯಿಂದಿರಿ. ಈ ಮಾರಾಟ ವ್ಯವಹಾರ ಪೂರ್ಣಗೊಳ್ಳು ವುದಕ್ಕೆ ಮೂರರಿಂದ ಆರು ತಿಂಗಳ ಕಾಲ ಹಿಡಿಯಬಹುದು. ಕನಿಷ್ಠ ಅಲ್ಲಿಯವರೆಗಾದರೂ ಕಂಪೆನಿಯ ಆಡಳಿತ ನಮ್ಮ ಕೈಯ್ಯಲಿದೆ. ಕಂಪೆನಿಯು ಎಂದಿನಂತೆ ಕೆಲಸ ಮಾಡುತ್ತದೆ" ಎಂದಿದ್ದಾರೆ.
ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಟ್ವಿಟರ್ ಸಂಸ್ಥೆ ಮಾರಾಟವಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ, ಕಂಪೆನಿಯ ಉದ್ಯೋಗಿಗಳ ಜತೆಗೆ ಸಿಇಒ ಸಭೆ ನಡೆಸಿದರು. “ಕಂಪೆನಿ ಮಾರಾಟದ ವರ್ತಮಾನ ಉದ್ಯೋಗಿಗಳಲ್ಲಿ ನಾನಾ ರೀತಿಯ ಭಾವನೆಗಳನ್ನು ಹುಟ್ಟುಹಾಕಿರಬಹುದು. ಟ್ವಿಟರ್ನ ಮುಂದಿನ ದಾರಿ ಹೇಗಿರುತ್ತೋ ಏನೋ ಎಂಬುದು ಸದ್ಯಕ್ಕೆ ಹೇಳಲು ಸಾಧ್ಯವಾಗದು. ಆದರೆ, ಮಾರಾಟ ಪ್ರಕ್ರಿಯೆ ಪೂರ್ಣವಾಗುವವರೆಗೆ ನಾವು ನಿಶ್ಚಿಂತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.