ದುಬೈ, ಮೇ 02 (DaijiworldNews/DB): ಯಕ್ಷಗಾನ ಅಭ್ಯಾಸ ತರಗತಿ ದುಬೈ ಪ್ರಸ್ತುತ ಪಡಿಸುವ ದುಬೈ ಯಕ್ಷೋತ್ಸವ-2022ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ ಲಲಿತೋಪಖ್ಯಾನದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಫಾರ್ಚೂನ್ ಗ್ರೂಪ್ನ ದುಬೈ ಗ್ರಾಂಡ್ ಹೋಟೇಲ್ನಲ್ಲಿ ಅರಬ್ ನಾಡಿನ ಪ್ರತಿಷ್ಟಿತ ಉದ್ಯೋಗಪತಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಭಾನುವಾರ ನಡೆಯಿತು.
ವಿದ್ಯಾರ್ಥಿಗಳಿಂದ ತರಗತಿಯ ಪ್ರಾರ್ಥನೆ, ಊರಿನಿಂದ ಬಂದ ಹಿರಿಯ ದಂಪತಿ ಮತ್ತು ಸೇರಿದ ಗಣ್ಯರಿಂದ ದೀಪ ಪ್ರಜ್ವಲನಾ ಕಾರ್ಯ ನಡೆಯಿತು. ತರಗತಿಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅವರು ಅತಿಥಿ ಕಲಾವಿದರಾದ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಅಮತಾ ಕೌಶಿಕ್ ರಾವ್, ಮತ್ತು ಚೆಂಡೆ-ಮದ್ದಳೆ ಕಲಾವಿದರಾದ ಕೌಶಿಕ್ ರಾವ್ ಪುತ್ತಿಗೆ, ಸವಿನಯ ನೆಲ್ಲಿತೀರ್ಥ, ಸ್ತ್ರೀ ವೇಷಧಾರಿ ದೀಪಕ್ ರಾವ್ ಪೇಜಾವರ, ಪ್ರಸಾಧನ –ವೇಷಭೂಷಣ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ನಿತಿನ್ ಕುಂಪಲ ಅವರ ಪರಿಚಯ ಮಾಡಿದರು.
ಆಶೀರ್ವಚನ ಮಾಡಿದ ಪುತ್ತಿಗೆ ರಾಘವೇಂದ್ರದ ಮಠದ ಟ್ರಸ್ಟಿ, ವೀನಸ್ ಗ್ರೂಪ್ ಆಫ್ ಹೋಟೇಲ್ಸ್ ನ ಮಾಲಕ ವಾಸುದೇವ ಭಟ್ ಪುತ್ತಿಗೆ, ಅರಬರ ನಾಡಿನಲ್ಲಿ ನಮ್ಮ ತುಳುನಾಡಿನ ಕಲೆಯನ್ನು ಅನಾವರಣಗೊಳಿಸುವುದು ಶ್ಲಾಘನೀಯ. ಇಂತಹ ಉತ್ತಮ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಉದ್ಯಮಿ, ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಬಂಟ ಸಮುದಾಯದ ನೇತಾರ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಗಣ್ಯರ ಮತ್ತು ಯಕ್ಷಗಾನಾಭಿಮಾನಿಗಳ ಬೆಂಬಲ ದೊರೆತರೆ ತುಂಬಿದ ಸಭಾಂಗಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದು ನಿಸ್ಸಂಶಯ ಎಂದು ಹೇಳಿದರು.
ಲಲಿತೋಪಖ್ಯಾನ –ಯಕ್ಷಗಾನ ಆಖ್ಯಾನದ ಆಮಂತ್ರಣ ಪತ್ರ- ಪ್ರವೇಶ ಪತ್ರ ಅನಾವರಣದ ಬಳಿಕ ಯಕ್ಷಗಾನ ಅಭ್ಯಾಸ ತರಗತಿಯ ಕ್ರೀಡಾ ಸಂಸ್ಥೆ ಯಕ್ಷಯೋಧಾಸ್ನ ಟೀಶರ್ಟ್ ಕೂಡ ಬಿಡುಗಡೆಗೊಳಿಸಲಾಯಿತು.
ಕೆಎನ್ಆರ್ಐ ಅಧ್ಯಕ್ಷ ಮತ್ತು ದುಬೈ ಫೋರ್ಚ್ನ್ ಗ್ರೂಪ್ ಆಫ್ ಹೊಟೇಲ್ನ ಪ್ರವೀಣ್ ಶೆಟ್ಟಿ ವಕ್ವಾಡಿ, ತುಳು ಮತ್ತು ಕನ್ನಡ ಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಹರೀಶ್ ಶೇರಿಗಾರ್ , ವೀನಸ್ ಗ್ರೂಪ್ ಆಫ್ ಹೊಟೇಲ್ಸ್ನ ವಾಸು ಭಟ್ ಪುತ್ತಿಗೆ, ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕ ಹರೀಶ್ ಬಂಗೇರ, ಉದ್ಯಮಿ, ಏಸ್ ಕ್ರೇನ್ಸ್ನ ಗುಣಶೀಲ್ ಶೆಟ್ಟಿ, ಕರ್ನಾಟಕ ಸಂಘ ಹಾಗೂ ಬಿಲ್ಲವಾಸ್ ದುಬೈ.
ನ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಪೂಜಾರಿ, ದುಬೈ ಕನ್ನಡ ಪಾಠ ಶಾಲೆ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಬಿಲ್ಲವ ಬಳಗ ಅಬುಧಾಬಿಯ ಅಧ್ಯಕ್ಷ ಮನೋಹರ್ ತೊನ್ಸೆ, ಕಲಾ ನಿರ್ದೇಶಕ ಬಿ. ಕೆ. ಗಣೇಶ್ ರೈ, ಅಬುಧಾಬಿ ನಿಹಾಲ್ ರೆಸ್ಟೋರೆಂಟ್ ಮಾಲಕ ಸುಂದರ್ ಶೆಟ್ಟಿ, ಪದ್ಮಶಾಲಿ ಸಮುದಾಯ ಅಧ್ಯಕ್ಷ ರಘುರಾಮ್ ಶೆಟ್ಟಿಗಾರ್, ಗಂತೂತ್ ಬಿಲ್ಡಿಂಗ್ ಮೆಟಿರಿಯಲ್ಸ್ ನ ಸುಜಾತ್ ಶೆಟ್ಟಿ, ದುಬೈ ಬ್ರಾಹ್ಮಣ ಸಮಾಜದ ದಯಾನಂದ್ ಹೆಬ್ಬಾರ್, ತುಳು ಚಿತ್ರರಂಗದ ನಿರ್ಮಾಪಕ ಶೋಧನ್ ಪ್ರಸಾದ್, ಶಾರ್ಜಾ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ್ ಬೈಲೂರು, ದುಬೈ ತುಳು ಪಾತೆರ್ಗ ತುಳು ಒರಿಪಾಗ ಸಂಘಟನೆಯ ಅಧ್ಯಕ್ಷ ಪ್ರೇಮ್ ಜಿತ್ ಮೊದಲದವರು ಉಪಸ್ಥಿತರಿದ್ದರು.
ತರಗತಿಯ ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿ ಪ್ರಸ್ತಾವನೆಗೈದರು. ತರಗತಿಯ ಹಿರಿಯ ಕಲಾವಿದ ಗಿರೀಶ್ ನಾರಾಯಣ್ ವಂದಿಸಿದರು. ಗಮ್ಮತ್ ಕಲಾವಿದರ ಅಧ್ಯಕ್ಷ ರಾಜೇಶ್ ಕುತ್ತಾರ್ ನಿರೂಪಿಸಿದರು.