ಮಾಸ್ಕೋ, ಮೇ 03(DaijiworldNews/MS): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು,ಈ ಹಿನ್ನಲೆಯಲ್ಲಿ ಅವರು ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೋಲಾಯ್ ಪತ್ರುಶೆವ್ ಅವರಿಗೆ ತಾತ್ಕಾಲಿಕವಾಗಿ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಕೆಜಿಬಿ ಕೌಂಟರ್ ಇಂಟೆಲಿಜೆನ್ಸಿ ಅಧಿಕಾರಿ ಪುಟಿನ್ ಕ್ಯಾನ್ಸರ್ ಚಿಕಿತ್ಸೆ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಳೆದ 18 ತಿಂಗಳಿನಿಂದ ಪುಟಿನ್ ಕ್ಯಾನ್ಸರ್ ಹಾಗೂ ಪಾರ್ಕಿಸನ್ಸ್ ಚಿಕಿತ್ಸೆ ಪಡೆಯುಲಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪುಟಿನ್ ಅವರ ಅನಾರೋಗ್ಯ ಪೀಡಿತರಾದಂತೆ ಮತ್ತು ಸಾರ್ವಜನಿಕವಾಗಿ ವಿಲಕ್ಷಣ ಚಡಪಡಿಕೆ ವರ್ತನೆ ಯನ್ನು ಉಲ್ಲೇಖಿಸಿ ಪುಟಿನ್ ಆರೋಗ್ಯ ಹದಗೆಟ್ಟಿರುವ ವದಂತಿಗಳಿವೆ ಎಂದು ವರದಿ ಹೇಳಿದೆ
ಅದರೂ , ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಸೋಮವಾರ, "ಈ ವರದಿ ಪುಷ್ಟೀಕರಿಸಲು ನಮಗೆ ಸಹಾಯ ಮಾಡುವಂತಹ ಯಾವುದೇ ಅಂಶ ಸಿಕ್ಕಿಲ್ಲ" ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.