ನವದೆಹಲಿ, ಮೇ 04 (DaijiworldNews/HR): ಟ್ವಿಟರ್ ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ಶುಲ್ಕವನ್ನು ವಿಧಿಸಬಹುದು ಎಂದು ಎಲೋನ್ ಮಸ್ಕ್ ಹೇಳಿದ್ದು, ಸಾಂದರ್ಭಿಕ ಬಳಕೆದಾರರಿಗೆ, ಟ್ವಿಟರ್ ಯಾವಾಗಲೂ ಉಚಿತ ಎಂದು ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್ ಅವರು ಏಪ್ರಿಲ್ 25 ರಂದು ಟ್ವಿಟರ್ ಅನ್ನು $44 ಮಿಲಿಯನ್ಗೆ ಖರೀದಿಸಿದ ಕೂಡಲೇ ಹಲವಾರು ಬದಲಾವಣೆಗಳನ್ನು ಸೂಚಿಸುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ವಾಣಿಜ್ಯ / ಸರ್ಕಾರಿ ಬಳಕೆದಾರರು ಟ್ವೀಟರ್ ಬಳಕೆಗೆ ಬೆಲೆ ತೆರಬೇಕಾಗಬಹುದು. ಆದರೆ ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಬಳಕೆ ಉಚಿತವಾಗಿರುತ್ತದೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.