ಇಸ್ಮಾಮಾಬಾದ್, ಮೇ 08 (DaijiworldNews/DB): ಸಮಾಧಿ ಮಾಡಲಾದ ಬಾಲಕಿಯ ಶವವನ್ನು ಹೊರ ತೆಗೆದು ಸುಮಾರು 17 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಪಾಕಿಸ್ತಾನದ ಗುಜರಾತ್ನ ಚಕ್ ಕಮಲಾ ಗ್ರಾಮದಲ್ಲಿ ನಡೆದಿದೆ.
ಅಕಾಲಿಕವಾಗಿ ಸಾವನ್ನಪ್ಪಿದ ಬಾಲಕಿಯ ಶವವನ್ನು ಆಕೆಯ ಕುಟುಂಬಸ್ಥರು ಸಂಪ್ರದಾಯ ಪ್ರಕಾರ ಹೂಳಿದ್ದರು. ಆದರೆ ಮರುದಿನ ಬೆಳಗ್ಗೆ ಹೋಗಿ ನೋಡಿದಾಗ ಮೃತದೇಹ ಸಮಾಧಿಯಿಂದ ಸುಮಾರು 200 ಚದರ ಅಡಿ ದೂರ ಹೊರಗೆ ಬಿದ್ದಿರುವುದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಬಾಲಕಿಯ ಶವಕ್ಕೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ. ಸುಮಾರು 17 ಮಂದಿ ಸೇರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಕಿಯ ಚಿಕ್ಕಪ್ಪ ಈ ಸಂಬಂಧ ದೂರು ದಾಖಲಿಸಿದ್ದು, ಸದ್ಯ ಶಂಕಿತ 17 ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ, ವೈಜ್ಞಾನಿಕ ವಿಧಾನಗಳ ಪ್ರಕಾರ ಪ್ರಕರಣದ ತನಿಖೆಯನ್ನು ಮುಂದುವರಿಸಲಾಗುತ್ತಿದೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್ಎನ್) ಉಪ ಕಾರ್ಯದರ್ಶಿ ಅತ್ತಾವುಲ್ಲಾ ತರಾರ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.