ಕೀವ್, ಮೇ 09 (DaijiworldNews/MS): ಯುದ್ಧಪೀಡಿತ ಉಕ್ರೇನ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರು ದಿಡೀರ್ ಭೇಟಿ ನೀಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪತ್ನಿ ಒಲೆನಾ ಝೆಲೆನ್ಸ್ಕಾ ಜತೆ ಮಾತುಕತೆ ನಡೆಸಿದ್ದಾರೆ.
ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ವಿಶ್ವ ತಾಯಂದಿರ ದಿನದ ಪ್ರಯುಕ್ತ ನಾನು ಇಲ್ಲಿಗೆ ಭೇಟಿ ನೀಡಬೇಕು ಅಂದುಕೊಂಡಿದೆ. ಯುದ್ದ ತುಂಬಾ ಕ್ರೂರವಾಗಿದ್ದು, ಹೀಗಾಗಿ ಸಮರ ಸ್ಥಗಿತಗೊಳಿಸಬೇಕಾಗಿದೆ. ಅಮೆರಿಕದ ಜನರು ಉಕ್ರೇನ್ ಜನರೊಂದಿಗೆ ಇದ್ದಾರೆ ಎಂಬುದನ್ನು ತೋರಿಸಿಕೊಡಬೇಕಾದದ್ದು ಮುಖ್ಯ ಎಂದು ನಾನು ಭಾವಿಸಿದ್ದೆ ಎಂದು ಹೇಳಿದ್ದಾರೆ.
ಜಿಲ್ ಬೈಡನ್ ಅವರು ಉಕ್ರೆನ್ ಹಾಗೂ ರಷ್ಯಾ ಅತಿಕ್ರಮಣದ ನಂತರ ಯುಕ್ರೇನ್ ಗೆ ನೆರವು ನೀಡುತ್ತಿರುವ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೆ ಯುದ್ದ ಆರಂಭವಾದ ಬಳಿಕ ಝೆಲೆನ್ಸ್ಕಿ ಪತ್ನಿ ಒಲೆನಾ ಝೆಲೆನ್ಸ್ಕಾ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.