ಇಸ್ಲಾಮಾನಾದ್ , ಮೇ 10 (DaijiworldNews/MS): ತನ್ನ ಮಗಳ ವಯಸ್ಸಿನ ಯುವತಿಯೊಂದಿಗೆ ವಿವಾಹವಾಗಿ ಸುದ್ದಿಯಾಗಿದ್ದ 49 ವರ್ಷದ ಪಾಕಿಸ್ತಾನಿ ರಾಜಕಾರಣಿ ಹಾಗೂ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕರೂ ಆಗಿದ್ದ ಡಾ.ಆಮೀರ್ ಲಿಯಾಖತ್ ಹುಸೈನ್, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ವಿವಾಹವಾದ ನಾಲ್ಕೇ ತಿಂಗಳಲ್ಲಿ ಆಮೀರ್'ರ ಮೂರನೇ ಪತ್ನಿ 18 ವರ್ಷದ ಯುವತಿ ಸೈಯದಾ ದಾನಿಯಾ ಷಾ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 2022 ರ ಫೆಬ್ರವರಿಯಲ್ಲಿ ಇವರಿಬ್ಬರೂ ವಿವಾಹವಾಗಿದ್ದು, ಪತಿ ಆಮೀರ್ ಲಿಯಾಖತ್ ಮದ್ಯಪಾನ ಮಾಡಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಲಿಯಾಖತ್ ಆರೋಪಗಳನ್ನು ನಿರಾಕರಿಸಿದ್ದಾರೆ.
ಅಮೀರ್ ಲಿಯಾಖತ್ ಎರಡನೇ ಪತ್ನಿಯಿಂದ, ಮೂರನೇ ವಿವಾಹವಾಗುವ 15 ತಿಂಗಳ ಹಿಂದೆಯೇ ದೂರವಾಗಿದ್ದರು. ಇಬ್ಬರೂ ಬೇರ್ಪಡುವ ನಿರ್ಧಾರ ಮಾಡಿ ಬಳಿಕ ವಿವಾಹದ 2 ದಿನಗಳ ಹಿಂದಷ್ಟೇ ಅಂದರೆ ಅಮೀರ್ ತಮ್ಮ ಎರಡನೇ ಹೆಂಡತಿಗೆ ವಿಚ್ಚೇದನ ನೀಡಿದ್ದರು. ಆದರೆ ಇದೀಗ ಮೂರನೇ ಪತ್ನಿಯೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.