ಪ್ಯಾಲೆಸ್ತೇನ್, ಮೇ 11 (DaijiworldNews/MS): ಅಲ್ ಜಜೀರಾ ವಾಹಿನಿಯ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ ಲೇಹಾ ಅವರನ್ನು ಇಸ್ರೇಲ್ ಪಡೆಗಳು ಹತ್ಯೆ ಮಾಡಿದೆ.
ಪ್ಯಾಲೆಸ್ತೇನ್ ನ ನೆಸ್ಟ್ ಬ್ಯಾಂಕ್ ನ ಜೇನಿನ್ ಪಟ್ಟಣದ ಮೇಲೆ ಇಸ್ರೇಲ್ ದಾಳಿ ಬಗ್ಗೆ ವರದಿ ಮಾಡಲು ತೆರಳಿದ್ದ ಅಲ್ ಜಜೀರಾ ವಾಹಿನಿಯ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ ಲೇಹಾ ಅವರನ್ನು ಇಸ್ರೇಲ್ ಸೇನೆಯ ಸ್ನೈಪರ್ ಗಳು ಮೇ 11ರ ಬುಧವಾರ ಬೆಳಗ್ಗೆ ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಪ್ಯಾಲೆಸ್ತೇನ್ ಸಚಿವಾಲಯ ತಿಳಿಸಿದೆ.
ಶಿರೀನ್ ಅವರು ಅರಬ್ ಭಾಷೆಯ ಚಾನೆಲ್ ನ ಜನಪ್ರಿಯ ವರದಿಗಾರ್ತಿಯಾಗಿದ್ದರು. ಜೆರುಸಲೇಂ ಮೂಲದ ಅಲ್ ಖುದ್ಸ್ ದಿನಪತ್ರಿಕೆಯ ಮತ್ತೊಬ್ಬ ಪ್ಯಾಲೆಸ್ತೇನ್ ಪತ್ರಕರ್ತ ಕೂಡಾ ದಾಳಿಯಲ್ಲಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್ ಮಿಲಿಟರಿ ಪಡೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.