ಕಾಬೂಲ್, ಮೇ 19 (DaijiworldNews/MS): ಇತ್ತೀಚೆಗಷ್ಟೇ ಮಹಿಳಾ ಶಿಕ್ಷಣ, ಮಹಿಳಾ ಉದ್ಯೋಗಿಗಳಿಗೆ ನಿಷೇಧ ಮತ್ತು ಮಹಿಳೆಯರ ಚಾಲನಾ ಪರವಾನಗಿ, ಮಾನವ ಹಕ್ಕುಗಳ ಆಯೋಗ ರದ್ದು ಸೇರಿದಂತೆ ಹಲವು ವಿವಾದಿತ ಕ್ರಮ ಕೈಗೊಂಡಿದ್ದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಇದೀಗ ತಾಲಿಬಾನ್ ಎಲ್ಲಾ ಟಿವಿ ಚಾನೆಲ್ಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ನಿರೂಪಕರಿಗೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವಂತೆ ನಿರ್ದೇಶಿಸಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ಸಂಘಟನೆಯು ಅಧಿಕಾರವನ್ನು ವಶಪಡಿಸಿಕೊಂಡಂದಿನಿಂದ ಅಫ್ಘಾನ್ ಮಹಿಳೆಯರ ವಿರುದ್ಧ ತಾಲಿಬಾನ್ನ ದೌರ್ಜನ್ಯಗಳು ನಿರಂತರ ಉಲ್ಬಣಗೊಳ್ಳುತ್ತಿವೆ.
ತಾಲಿಬಾನ್ ತನ್ನ ಅಧಿಕೃತ ಆದೇಶದಲ್ಲಿ, ಅಫ್ಘಾನಿಸ್ತಾನದ ಯುಎನ್ ಅಸಿಸ್ಟೆನ್ಸ್ ಮಿಷನ್ (UNAMA) ನ ಮಹಿಳಾ ಸಿಬ್ಬಂದಿಗೆ ಕಚೇರಿಗಳಲ್ಲಿ ಹಿಜಾಬ್ ಧರಿಸಲು ನಿರ್ದೇಶಿಸಿದೆ ಮತ್ತು ಅಫ್ಘಾನ್ ಮಹಿಳೆಯರ ಮೇಕಪ್ ಮಾಡುವಂತಿಲ್ಲ ಎಂದು ಹೇಳಿದೆ.
ಇದರೊಂದಿಗ್6 ಮತ್ತು ಅದಕ್ಕಿಂತ ಮೇಲ್ಪಟ್ಟ ತರಗತಿಯ ಹೆಣ್ಣುಮಕ್ಕಳಿಗೆ ಶಿಕ್ಷಣದ ಮೇಲೆ ನಿಷೇಧ ಹೇರಲಾಗಿದೆ. ಮಹಿಳೆಯರು ಈ ಆದೇಶವನ್ನು ಪಾಲಿಸದಿದ್ದರೆ ಅವರ ಪೋಷಕರಿಗೆ ಶಿಕ್ಷೆ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಾಲಿಬಾನ್ ಎಚ್ಚರಿಸಿದೆ.