ಶ್ರೀಲಂಕಾ, ಮೇ 20 (DaijiworldNews/HR): ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಶ್ರೀಲಂಕಾ ಕ್ಯಾಬಿನೆಟ್ಗೆ ಒಂಬತ್ತು ಮಂದಿ ಹೊಸ ಸಚಿವರು ಸೇರ್ಪಡೆಯಾಗಿದ್ದು, ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶ್ರೀಲಂಕಾ ಪ್ರಧಾನಿ
ಶ್ರೀಲಂಕಾ ಫ್ರೀಡಂ ಪಕ್ಷದ (ಎಸ್ಎಲ್ಎಫ್ಪಿ) ಮಾಜಿ ಸಚಿವ ನಿಮಲ್ ಸಿರಿಪಾಲ ಡಿ ಸಿಲ್ವಾ, ಸ್ವತಂತ್ರ ಸಂಸದ ಸುಶೀಲ್ ಪ್ರೇಮಜಯಂತ, ವಿಜಯದಾಸ ರಾಜಪಕ್ಸೆ, ತಿರಾನ್ ಅಲೆಸ್ ಸೇರಿದಂತೆ ಒಂಬತ್ತು ಹೊಸ ಸಚಿವರು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ನಿಮಲ್ ಸಿರಿಪಾಲ ಡಿ ಸಿಲ್ವಾ ಪೋರ್ಟ್ಸ್ ಅವರನ್ನು ನೌಕಾ ಮತ್ತು ವಿಮಾನಯಾನ ಸೇವೆಗಳ ಸಚಿವರನ್ನಾಗಿ, ಸುಶೀಲ್ ಪ್ರೇಮಜಯಂತ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ. ಆರೋಗ್ಯ ಸಚಿವರಾಗಿ ಕೆಹೆಲಿಯಾ ರಂಬುಕ್ವೆಲ್ಲಾ, ವಿಜಯದಾಸ್ ರಾಜಪಕ್ಸೆ ಅವರಿಗೆ ನ್ಯಾಯ, ಕಾರಾಗೃಹ ವ್ಯವಹಾರ, ಸಾಂವಿಧಾನಿಕ ಸುಧಾರಣಾ ಸಚಿವಾಲಯದ ಉಸ್ತುವಾರಿ ನೀಡಲಾಗಿದೆ.
ಪ್ರವಾಸೋದ್ಯಮ ಮತ್ತು ಭೂಮಿ ಖಾತೆಯನ್ನು ಹರಿನ್ ಫೆರ್ನಾಂಡೊಗೆ, ತೋಟದ ಕೈಗಾರಿಕೆಗಳ ಖಾತೆಯನ್ನು ರಮೇಶ ಪತಿರಾನಗೆ, ಕಾರ್ಮಿಕ ಮತ್ತು ವಿದೇಶಿ ಉದ್ಯೋಗ ಖಾತೆಯನ್ನು ಮನುಷ ನಾಣಯಕರ ಅವರಿಗೆ, ವ್ಯಾಪಾರ, ವಾಣಿಜ್ಯ ಮತ್ತು ಆಹಾರ ಭದ್ರತಾ ಸಚಿವಾಲಯವನ್ನು ನಳಿನ್ ಫೆರ್ನಾಂಡೊಗೆ ನೀಡಲಾಗಿದೆ. ತಿರಾನ್ ಅಲೆಸ್ ಅವರನ್ನು ಸಾರ್ವಜನಿಕ ಭದ್ರತಾ ಸಚಿವರನ್ನಾಗಿ ಮಾಡಲಾಗಿದೆ.
ಇನ್ನು ಕಳೆದ ವಾರ ನಾಲ್ವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಈಗ ಶ್ರೀಲಂಕಾ ಕ್ಯಾಬಿನೆಟ್ ಅಧ್ಯಕ್ಷ ಮತ್ತು ಪ್ರಧಾನಿ ಸೇರಿದಂತೆ 25 ಸದಸ್ಯರನ್ನು ಹೊಂದಿದೆ.