ಟೋಕಿಯೋ, ಮೇ 23 (DaijiworldNews/MS): ಪ್ರಭಾವಿ ಗುಂಪುಗಳ ಸದಸ್ಯ ರಾಷ್ಟ್ರಗಳ ನಡುವಣ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಇಂಡೋ–ಪೆಸಿಫಿಕ್ ಪ್ರದೇಶದ ಬೆಳವಣಿಗೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎರಡು ದಿನಗಳ ಭೇಟಿಗಾಗಿ ಜಪಾನ್ಗೆ ಆಗಮಿಸಿದ್ದಾರೆ.
"ಟೋಕಿಯೋದಲ್ಲಿ ಬಂದಿಳಿದಿದ್ದೇನೆ. ಈ ಭೇಟಿಯ ಸಮಯದಲ್ಲಿ ಕ್ವಾಡ್ ಶೃಂಗಸಭೆ, ಸಹವರ್ತಿ ಕ್ವಾಡ್ ನಾಯಕರನ್ನು ಭೇಟಿ ಮಾಡುವುದು, ಜಪಾನಿನ ಉದ್ಯಮಿಗಳೊಂದಿಗೆ ಸಂವಹನ ನಡೆಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ " ಎಂದು ಪ್ರಧಾನಿ ಮೋದಿ ಜಪಾನೀಸ್ ಮತ್ತು ಇಂಗ್ಲಿಷ್ ಎರಡರಲ್ಲೂ ಟ್ವೀಟ್ ಮಾಡಿದ್ದಾರೆ
ಟೋಕಿಯೋಗೆ ಆಗಮಿಸಿದ ಪ್ರಧಾನಿನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ ದೊರೆಯಿತು.ವಿಮಾನ ನಿಲ್ದಾಣದಲ್ಲಿ ನೂರಾರು ಭಾರತೀಯರು 'ಭಾರತ್ ಮಾತಾ ಕೀ ಶೇರ್' ಎಂಬ ಘೋಷಣೆಯೊಂದಿಗೆ ಮೋದಿ ಸ್ವಾಗತಿಸಿದರು.
ಓಹಾಯೋ, ಟೋಕಿಯೋ! ಕಳೆದ 8 ವರ್ಷಗಳಲ್ಲಿ ಜಪಾನ್ಗೆ ಐದನೇ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೋಕಿಯೊದಲ್ಲಿ ಆತ್ಮೀಯ ಸ್ವಾಗತದೊರಕಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊದ ಹೋಟೆಲ್ ಹೊರಗೆ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರು ಪುಟ್ಟ ಬಾಲೆಯ ರೇಖಾಚಿತ್ರವನ್ನು ಸಹ ನೋಡಿದರು ಮತ್ತು ಮಕ್ಕಳೊಂದಿಗೆ ಸಂವಾದದ ಸಮಯದಲ್ಲಿ ಆಕೆಗೆ ಆಟೋಗ್ರಾಫ್ ನೀಡಿದರು