ಟೋಕಿಯೊ, ಮೇ 24(DaijiworldNews/SM) ಭಾರತ ಮತ್ತು ಜಪಾನ್ ‘ನೈಸರ್ಗಿಕ ಪಾಲುದಾರರು’, ಈ ಸಂಬಂಧವು ಅನ್ಯೋನ್ಯತೆ, ಆಧ್ಯಾತ್ಮಿಕತೆ, ಸಹಕಾರ ಮತ್ತು ಒಗ್ಗೂಡಿವಿಕೆಯಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಜಪಾನ್ನ ಟೋಕಿಯೊದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದು ಭಾರತ ಮತ್ತು ಜಪಾನ್ ‘ನೈಸರ್ಗಿಕ ಪಾಲುದಾರರು’ ಎಂದಿದ್ದಾರೆ. ಈ ಸಂಬಂಧವು ಅನ್ಯೋನ್ಯತೆ, ಆಧ್ಯಾತ್ಮಿಕತೆ, ಸಹಕಾರ ಮತ್ತು ಒಗ್ಗೂಡಿವಿಕೆಯಿಂದ ಕೂಡಿದೆ ಎಂದು ಮೋದಿ ಹೇಳಿದ್ದಾರೆ.
“ಭಾರತೀಯರು ನಮ್ಮ ‘ಕರ್ಮಭೂಮಿ’ಯೊಂದಿಗೆ ಹೃದಯಸಂಬಂಧವನ್ನಿಟ್ಟುಕೊಂಡಿರುತ್ತಾರೆ. ಆದರೆ ನಮ್ಮ ‘ಮಾತೃಭೂಮಿ’ ಮೇಲಿನ ಪ್ರೀತಿ ಎಂದಿಗೂ ಮರೆಯಾಗುವುದಿಲ್ಲ. ನಾವು ನಮ್ಮ ಮಾತೃಭೂಮಿಯಿಂದ ದೂರವಿರಲು ಸಾಧ್ಯವಿಲ್ಲ,ಇದು ನಮ್ಮ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದ್ದಾರೆ. ಚಿಕಾಗೋಗೆ ಹೋಗುವ ಮೊದಲು, ಸ್ವಾಮಿ ವಿವೇಕಾನಂದರು ಜಪಾನ್ಗೆ ಬಂದರು. ದೇಶವು ಅವರ ಮನಸ್ಸಿನಲ್ಲಿ ದೊಡ್ಡ ಛಾಪು ಮೂಡಿಸಿದೆ. ಭಾರತದ ಯುವಕರು ತನ್ನ ಜೀವನದಲ್ಲಿ ಒಮ್ಮೆಯಾದರೂ ಜಪಾನ್ಗೆ ಭೇಟಿ ನೀಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಸ್ವಾಮಿ ವಿವೇಕಾನಂದರ ಈ ಸದ್ಭಾವನೆಯನ್ನು ಮುಂದಿಟ್ಟುಕೊಂಡು, ಜಪಾನ್ನ ಯುವ ಜನಾಂಗ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಲಸಿಕೆಗಳು ಲಭ್ಯವಾದಾಗ ಭಾರತವು ತನ್ನ ಕೋಟಿಗಟ್ಟಲೆ ನಾಗರಿಕರಿಗೆ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ಪೂರೈಸಿದೆ ಮತ್ತು ಅವುಗಳನ್ನು ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿದೆ. ಭಾರತವು ಗೌತಮ ಬುದ್ಧನ ಆಶೀರ್ವಾದವನ್ನು ಪಡೆಯುವಷ್ಟು ಅದೃಷ್ಟಶಾಲಿಯಾಗಿದೆ. ಎಷ್ಟೇ ದೊಡ್ಡ ಸವಾಲು ಎದುರಾದರೂ ಭಾರತವು ಮಾನವೀಯತೆಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ, ಭಾರತವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತದೆ. ಕಳೆದ 100 ವರ್ಷಗಳಲ್ಲಿ ಅತಿದೊಡ್ಡ ಬಿಕ್ಕಟ್ಟು ಕೊವಿಡ್ ಸಮಯದಲ್ಲಿ, ಭಾರತವು ಜಗತ್ತಿನಾದ್ಯಂತ ಜನರಿಗೆ ಸಹಾಯ ಮಾಡಿದೆ ಎಂದರು. ನಮ್ಮ ಸಾಮರ್ಥ್ಯವನ್ನು ಬೆಳೆಸುವಲ್ಲಿ ಜಪಾನ್ ಪ್ರಮುಖ ಪಾಲುದಾರ ಎಂದು ಮೋದಿ ಹೇಳಿದ್ದಾರೆ.