ಟೋಕಿಯೋ, ಮೇ 24 (DaijiworldNews/HR): ಟೋಕಿಯೊದಲ್ಲಿ ಜಪಾನ್ನ ಮಾಜಿ ಪ್ರಧಾನಿ ಯೋಶಿಹಿಡೆ ಸುಗಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿಯಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ಮೋದಿ ಮತ್ತು ಯೋಶಿಹಿಡೆ ಸುಗಾ ವಿನಿಮಯ ಮಾಡಿಕೊಂಡಿದ್ದು, ಜಪಾನ್ ಸಂಸದರ ನಿಯೋಗವನ್ನು ಭಾರತಕ್ಕೆ ಮುನ್ನಡೆಸಲು ಪ್ರಧಾನಿ ಸುಗಾ ಅವರನ್ನು ಆಹ್ವಾನಿಸಿದ್ದಾರೆ.
ಇನ್ನು ಸೆಪ್ಟೆಂಬರ್ 2021 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಮೊದಲ ಇನ್-ಪರ್ಸನ್ ಕ್ವಾಡ್ ಲೀಡರ್ಸ್ ಶೃಂಗಸಭೆಯ ಬದಿಯಲ್ಲಿ ತಮ್ಮ ದ್ವಿಪಕ್ಷೀಯ ಸಭೆ ಸೇರಿದಂತೆ ತಮ್ಮ ಹಿಂದಿನ ಸಂವಾದಗಳನ್ನು ಅವರು ನೆನಪಿಸಿಕೊಂಡರು.