ಅಬುಜಾ(ನೈಜೀರಿಯಾ), ಮೇ 25 (DaijiworldNews/DB): ನೈಜಿರೀಯಾ ಮಿಲಿಟರಿಗೆ ಮಾಹಿತಿ ನೀಡುತ್ತಿರುವ ಆರೋಪದ ಮೇಲೆ ಬೋಕೋ ಹರಾಂ ಉಗ್ರರು ರೈತರ ನರಮೇಧ ನಡೆಸಿದ ಘಟನೆ ಇಲ್ಲಿನ ಈಶಾನ್ಯದಲ್ಲಿರುವ ಕ್ಯಾಮೆರೂನಿಯನ್ ಗಡಿಯಲ್ಲಿರುವ ಬೊರ್ನೊ ಪ್ರಾಂತ್ಯದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ನೈಜಿರೀಯಾ ಮಿಲಿಟರಿಗೆ ಮಾಹಿತಿ ನೀಡುತ್ತಿರುವುದಾಗಿ ಆರೋಪಿಸಿ ಕನಿಷ್ಠ 50 ಮಂದಿ ರೈತರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಇನ್ನು ಈ ಧಾಳಿಯಲ್ಲಿ ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಉಗ್ರರು ದಾಳಿ ಮಾಡಿದ್ದು, ನಾವೆಲ್ಲಾ ಆತಂಕಗೊಂಡಿದ್ದೇವೆ. ಈಗಾಗಲೇ 50 ಮಂದಿಯ ಶವವನ್ನು ಹೂತಿದ್ದೇವೆ. ಕಟ್ಟಿಗೆ ತರಲು ಹೋಗಿದ್ದವರ ಮೇಲೆಯೂ ಉಗ್ರರು ಪೈಶಾಚಿಕ ಕೃತ್ಯ ಮೆರೆದಿದ್ದಾರೆ. ಮಾರಣಾಂತಿಕ ದಾಳಿಯಿಂದಾಗಿ ಹಲವರು ಜೀವ ಕಳೆದುಕೊಂಡಿದ್ದರೆ, ಇನ್ನೂ ಅನೇಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ರೈತರೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸ್ಥಳೀಯ ರೈತರೊಬ್ಬರ ಪ್ರಕಾರ, ಈ ಘಟನೆಯಿಂದ ನಾವೆಲ್ಲ ಭಯಭೀತರಾಗಿದ್ದೇವೆ. ಕಣ್ಣೆದುರೇ ಜೀವ ಕಳೆದುಕೊಂಡ 50 ಮಂದಿಯ ಶವವನ್ನು ಹೂತಿದ್ದೇವೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದ್ದರು. ಉಳಿದವರು ಕಟ್ಟಿಗೆಗಳನ್ನು ಸಂಗ್ರಹಿಸಲು ತೆರಳಿದ್ದು ಅವರ ಮೇಲೂ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬೈಕ್ ಗಳಲ್ಲಿ ಆಗಮಿಸಿದ್ದ ಬೋಕೋ ಹರಾಮ್ ಉಗ್ರರು ರೈತರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ರೈತರು, ದನಗಾಹಿಗಳು ಮತ್ತು ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.