ಟೋಕಿಯೋ, ಮೇ 25 (DaijiworldNews/MS): ಜಪಾನಿನ ವ್ಯಕ್ತಿಯೊಬ್ಬ ಪ್ರಾಣಿಯಂತೆ ಕಾಣಬೇಕೆಂಬ ತನ್ನ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾನೆ.
ಟ್ವಿಟ್ಟರ್ ಬಳಕೆದಾರ @toco_eevee ಅವರು ಟ್ವಿಟರ್ನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಇದು ನೆಟ್ಟಿಗರನ್ನು ಚಕಿತರನಾಗಿಸಿದೆ.
ಸ್ಥಳೀಯ ಜಪಾನಿನ ಸುದ್ದಿಯ ಪ್ರಕಾರ , ನನ್ನ ಮೆಚ್ಚಿನವು ಚತುರ್ಭುಜ ಪ್ರಾಣಿಗಳು, ವಿಶೇಷವಾಗಿ ತುಂಬಾ ಮುದ್ದಾಗಿರುತ್ತದೆ. ಇನ್ನು ಉದ್ದ ಕೂದಲಿನ ನಾಯಿಗಳು ಮಾನವನ ಆಕೃತಿಯನ್ನು ಮರೆಮಾಚುತ್ತದೆ. ಕೋಲೀಸ್ ಒಂದು ವಿಶಿಷ್ಟ ತಳಿಯ ನಾಯಿಯಾಗಿದ್ದು ಇದು ನೈಜತೆಯಿಂದ ಕೂಡಿದೆ ಹೀಗಾಗಿ ಈ ನಾಯಿಯ ತಳಿಯನ್ನು ಆಯ್ಕೆ ಮಾಡಿದೆ ಎಂದು ಟೋಕೊ ಹೇಳಿದ್ದಾರೆ.
ನಾನು ನಾಯಿಯಂತೆ ಕಾಣಲು, ಜೆಪ್ಪೆಟ್ ಎಂಬ ವೃತ್ತಿಪರ ಏಜೆನ್ಸಿಯಿಂದ ಸಾಧ್ಯವಾಯಿತು. ಈ ಸಂಸ್ಥೆಯೂ ಸಂಪೂರ್ಣ ವೇಷಭೂಷಣವನ್ನು ತಯಾರಿಸಲು 40 ದಿನಗಳನ್ನು ತೆಗೆದುಕೊಂಡಿದೆ ಮತ್ತು ₹ 12 ಲಕ್ಷ (2 ಮಿಲಿಯನ್ ಯೆನ್) ಗಿಂತ ಹೆಚ್ಚು ವೆಚ್ಚವಾಗಿದೆ .
ಟೋಕೊ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾನೆ.