ವ್ಯಾಟಿಕನ್ ಸಿಟಿ, ಮೇ 30 (DaijiworldNews/DB): ವಿವಿಧ ದೇಶಗಳ 21 ಮಂದಿ ಕ್ರೈಸ್ತ ಧರ್ಮಾಧಿಕಾರಿಗಳನ್ನು (ಬಿಷಪ್ ಗಳನ್ನು) ಕಾರ್ಡಿನಲ್ ಪದವಿಗೆ ಉನ್ನತೀಕರಿಸಲಾಗುತ್ತದೆ ಎಂದು ಕ್ರೈಸ್ತರ ಪರಮೋತ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ತಿಳಿಸಿದ್ದು, ಇದರಲ್ಲಿ ಇಬ್ಬರು ಭಾರತೀಯ ಧರ್ಮಾಧಿಕಾರಿಗಳೂ ಸೇರಿದ್ದಾರೆ.
ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಚೌಕದಲ್ಲಿ ಆಯೋಜಿಸಲಾಗಿದ್ದ ಬೃಹತ್ ಧಾರ್ಮಿಕ ಸಮಾವೇಶದಲ್ಲಿ ಅವರು, ಕಾರ್ಡಿನಲ್ ಪದವಿಗೆ ಆಯ್ಕೆ ಮಾಡಿರುವ ಹೆಸರುಗಳನ್ನು ಪ್ರಕಟಗೊಳಿಸಿದರು.
ವ್ಯಾಟಿಕನ್ ಸಿಟಿಯಲ್ಲಿ ಆ. 27ರಂದು ಸಮಾರಂಭ ನಡೆಯಲಿದೆ. ಈ ವೇಳೆ ಕಾರ್ಡಿನಲ್ ಪದವಿ ಪ್ರದಾನ ಮಾಡಲಾಗುವುದು ಎಂದವರು ಇದೇ ವೇಳೆ ತಿಳಿಸಿದರು.