ವಿಶ್ವಸಂಸ್ಥೆ, ಮೇ 30 (DaijiworldNews/DB): ನಿಷೇಧಿತ ಅಲ್-ಕೈದಾ (ಎಕ್ಯೂಐಎಸ್)ಉಗ್ರ ಸಂಘಟನೆ ಅಫ್ಗಾನಿಸ್ತಾನದಿಂದ ಕಾಶ್ಮೀರದತ್ತ ತನ್ನ ಕಾರ್ಯಚಟುವಟಿಕೆ ವಿಸ್ತರಿಸಲು ಹೊಂಚು ಹಾಕುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ವಿಶ್ವಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧ ಪರಿವೀಕ್ಷಣಾ ತಂಡದ 13ನೇ ವರದಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ತಾಲಿಬಾನ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳು ಅಪ್ಘಾನ್ನಲ್ಲಿ ನಿರಂತರವಾಗಿ ಶಾಂತಿ, ಭದ್ರತೆಗೆ ಆತಂಕ ಸೃಷ್ಟಿ ಮಾಡುತ್ತಿವೆ.
ಅಲ್ಲದೆ ಅಲ್-ಕೈದಾದ ಅಧೀನ ಸಂಘಟನೆಯಾದ ಎಕ್ಯೂಐಎಸ್ ಅಫ್ಘಾನ್ನಲ್ಲಿ ಹೆಚ್ಚು ಭಯೋತ್ಪಾದಕರನ್ನು ಹೊಂದಿದೆ. ಆ ಸಂಘಟನೆಯು ತನ್ನ ಬಲವರ್ಧನೆ ಮಾಡಿಕೊಳ್ಳುವುದರೊಂದಿಗೆ ಅಪ್ಘಾನ್ನಿಂದ ಭಾರತದ ಕಾಶ್ಮೀರದತ್ತ ಕಾರ್ಯ ಚಟುವಟಿಕೆ ವಿಸ್ತರಣೆ ಮಾಡಲು ಹೊಂಚು ಹಾಕಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.