ಕೀವ್, ಜೂ 02 (DaijiworldNews/HR): 2 ಲಕ್ಷ ಉಕ್ರೇನ್ನ ಮಕ್ಕಳನ್ನು ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ಯಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಝೆಲೆನ್ಸ್ಕಿ, ರಷ್ಯಾ ವಶದಲ್ಲಿರುವ ಉಕ್ರೇನಿಯನ್ನಲ್ಲಿ 2ಲಕ್ಷ ಮಂದಿ ಮಕ್ಕಳು ಇದ್ದಾರೆ. ಎಲ್ಲರನ್ನೂ ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಪಶ್ಚಿಮ ಉಕ್ರೇನ್ನಲ್ಲಿ ರಷ್ಯಾದ ಕ್ಷಿಪಣಿ, ರೈಲು ಹಳಿಗಳಿಗೆ ಅಪ್ಪಳಿಸಿ ಐವರು ಗಾಯಗೊಂಡಿದ್ದಾರೆ ಎಂದು ಎಲ್ವಿವ್ ಪ್ರಾದೇಶಿಕ ಗವರ್ನರ್ ಮ್ಯಾಕ್ಸಿಮ್ ಕೊಜಿಟ್ಸ್ಕಿ ಘೋಷಿಸಿದ್ದಾರೆ.