ಸುಡಾನ್ , ಜೂ 07(DaijiworldNews/MS): 12 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆರೋಪದಲ್ಲಿ ಹಸು ಮತ್ತು ಅದರ ಮಾಲೀಕರನ್ನು ಬಂಧಿಸಿದ ವಿಚಿತ್ರ ಘಟನೆ ದಕ್ಷಿಣ ಸುಡಾನ್ ನಲ್ಲಿ ನಡೆದಿದೆ.
ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ, ಅಲ್ಲಿನ ಮಾಧ್ಯಮವೊಂದರ ವರದಿಯಂತೆ, ಕಳೆದ ವಾರದಲ್ಲಿ ಈ ಘಟನೆ ನಡೆದಿದ್ದು, ಉಳುಮೆ ಮಾಡುತ್ತಿದ್ದ ಸಂದರ್ಭ ಪಕ್ಕದಲ್ಲೇ ಹಾದು ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿ ತಕ್ಷಣವೇ ಕೊಂದು ಹಾಕಿದೆ
ಪೊಲೀಸ್ ವಕ್ತಾರ, ಮೇಜರ್ ಎಲಿಜಾ ಮಾಬೋರ್, “ಜಾನುವಾರುವನ್ನು ರುಂಬೆಕ್ ಸೆಂಟ್ರಲ್ ಕೌಂಟಿಯ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಬಾಲಕನನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿದ್ದು ಬಳಿಕ ಅಂತ್ಯಕ್ರಿಯೆಗಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸುಡಾನ್ ನಲ್ಲಿ ಒಂದು ತಿಂಗಳ ಹಿಂದೆ 45 ವರ್ಷದ ಮಹಿಳೆಯನ್ನು ಕೊಂದ ಆರೋಪದಲ್ಲಿ ಟಗರನ್ನು ಬಂಧಿಸಿ ಮಿಲಿಟರಿ ಶಿಬಿರದಲ್ಲಿ ಕಠಿಣ ಕಾರ್ಮಿಕರ ಶಿಕ್ಷೆ ವಿಧಿಸಿದ್ದು ಅಲ್ಲಿ ಅದನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿಡಲಾಗುತ್ತದೆ. ಅದು ಬಿಡುಗಡೆಯಾದ ನಂತರ, ದೇಶದ ಕಾನೂನುಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಅದರ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು