ವಾಷಿಂಗ್ಟನ್, ಜೂ 11 (DaijiworldNews/DB): ಹಿರಿಯ ನಾಗರಿಕರಿಗೆ ವಂಚನೆ ಎಸಗಿದ ಆರೋಪದಡಿ ಭಾರತೀಯ ಮೂಲದ ಪ್ರಜೆಯೊಬ್ಬನನ್ನು ವಾಷಿಂಗ್ಟನ್ನಲ್ಲಿಅಧಿಕಾರಿಗಳು ಬಂಧಿಸಿದ್ದಾರೆ.
ಅನಿರುದ್ಧ ಕಲ್ಕೊಟೆ (24) ಬಂಧಿತ ಆರೋಪಿ. ಈತ ಹಿರಿಯ ನಾಗರಿಕರನ್ನೇ ಗುರಿಯಾಗಿಸಿ ವಂಚನೆ ಎಸಗುತ್ತಿದ್ದ. ಸಂಚು ನಡೆಸಿ ಇಮೇಲ್ ಮೂಲಕ ವಂಚನೆ ನಡೆಸುತ್ತಿದ್ದ. ಅಲ್ಲದೆ ಈತನೊಂದಿಗೆ ಹೂಸ್ಟನ್ ನಿವಾಸಿ ಎಂ.ಡಿ. ಅಜದ್ (25) ಎಂಬಾತನು ಕೂಡಾ ಭಾಗಿಯಾಗಿದ್ದ ಎನ್ನಲಾಗಿದೆ. ಸದ್ಯ ಬಂಧಿತ ಆರೋಪಿಯನ್ನು ಹೂಸ್ಟನ್ನ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು.
ಆರೋಪ ಸಾಬೀತಾದಲ್ಲಿ 20 ವರ್ಷದವರೆಗೆ ಸಜೆ, 1.95 ಕೋಟಿ ರೂ,ಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಮೂವರು ಭಾರತೀಯರ ಅಪರಾಧ ಸಾಬೀತಾಗಿದ್ದು, ಶಿಕ್ಷೆ ಪ್ರಕಟಗೊಳ್ಳಬೇಕಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.