ರೋಮ್, ಜೂ 12 (DaijiworldNews/DB): ಎರಡು ದಿನಗಳ ಹಿಂದೆ ಇಟಲಿಯ ರಾಡಾರ್ನಿಂದ ಕಣ್ಮರೆಯಾಗಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಏಳು ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಟಸ್ಕನಿಯ ಲುಕ್ಕಾದಿಂದ ಟೇಕ್ ಗುರುವಾರ ಟೇಕಾಫ್ ಆಗಿ ಟ್ರೆವಿಸೋ ನಗರದ ಕಡೆಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ರಾಡಾರ್ನಲ್ಲಿ ಕಣ್ಮರೆಯಾಗಿತ್ತು. ಇದೀಗ ಕಣ್ಮರೆಯಾಗಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಟಸ್ಕನಿ ಹಾಗೂ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿದೆ. ಪತನಗೊಂಡ ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪ್ರಯಾಣಿಸುತ್ತಿದ್ದ ಎಲ್ಲಾ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟರ್ಕಿ ಮೂಲದ ನಾಲ್ವರು, ಲೆಬನಾನಿಯಾದ ಇಬ್ಬರು ಹಾಗೂ ಇಟಲಿ ಮೂಲದ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.