ಜೂ 14 (DaijiworldNews/HR): 'ಹೌ ಟು ಮರ್ಡರ್ ಯುವರ್ ಹಸ್ಬೆಂಡ್' ಎಂಬ ಪುಸ್ತಕವನ್ನು ಬರೆದ 71 ವರ್ಷದ ಬರಹಗಾರ್ತಿ ನ್ಯಾನ್ಸಿ ಕ್ರಾಂಪ್ಟನ್-ಬ್ರೋ ಅವರಿಗೆ ತನ್ನ ಗಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ನ್ಯಾನ್ಸಿ ಕ್ರಾಂಪ್ಟನ್-ಬ್ರೋ ಅವರ ಪತಿ ಡೇನಿಯಲ್ ಬ್ರೋಫಿ ಅವರು ಕೆಲಸ ಮಾಡುತ್ತಿದ್ದ ಯುಎಸ್ನ ಒರೆಗಾನ್ ಪಾಕಶಾಲೆಯ ಸಂಸ್ಥೆಯಲ್ಲಿ ಜೂನ್ 2018 ರಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಬೆನ್ನಿಗೆ ಮತ್ತು ಎದೆಗೆ ಗುಂಡು ತಗುಲಿತ್ತು. ಘಟನೆಯ ಮೂರು ತಿಂಗಳ ನಂತರ ನ್ಯಾನ್ಸಿಯನ್ನು ಬಂಧಿಸಿ ಅಂದಿನಿಂದ ಅವರು ಜೈಲಿನಲ್ಲಿದ್ದಾರೆ..
ಪೋರ್ಟ್ಲ್ಯಾಂಡ್ನ ಮಲ್ಟ್ನೋಮಾ ಕೌಂಟಿ ನ್ಯಾಯಧೀಶರು ನ್ಯಾನ್ಸಿಯನ್ನು ಎರಡನೇ ಹಂತದ ಕೊಲೆಗೆ ತಪ್ಪಿತಸ್ಥರೆಂದು ಪರಿಗಣಿಸಿದ್ದು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇನ್ನು ದಿ ವಾಂಗ್ ಲವರ್ ಮತ್ತು ದಿ ರಾಂಗ್ ಹಸ್ಬೆಂಡ್ ನಂತಹ ಪುಸ್ತಕಗಳನ್ನು ಪ್ರಕಟಿಸಿದ ಅವರು ಒಮ್ಮೆ ಉತ್ತಮ ಕಾದಂಬರಿಗಾರ್ತಿ ಎಂದು ಹೆಸರು ಗಳಿಸಿದ್ದರು.