ಸ್ಕಾಟ್ಲೆಂಡ್ ಜೂ 16 (DaijiworldNews/MS): ಮೂರು ವರ್ಷಗಳ ಹಿಂದೆ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯರಿಗೆ ಸ್ಕಾಟಿಷ್ ನ್ಯಾಯಾಲಯವು ಬುಧವಾರ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಅರೋಪಿಯನ್ನು 39 ವರ್ಷದ ಮನೇಶ್ ಗಿಲ್ ಎನ್ನಲಾಗಿದೆ. ಈತನನ್ನು ಕಳೆದ ತಿಂಗಳು ಎಡಿನ್ಬರ್ಗ್ನ ಹೈಕೋರ್ಟ್ನಲ್ಲಿ ದೋಷಿ ಎಂದು ಘೋಷಿಸಲಾಗಿತ್ತು. ನಂತರದ ಬೆಳವಣಿಗೆಯ ಆಧಾರದ ಮೇಲೆ ಇದೀಗ ಸ್ಕಾಟಿಷ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ವಿವಾಹಿತ ಹಾಗೂ ಮೂರು ಮಕ್ಕಳ ತಂದೆಯಾಗಿರುವ ಮನೇಶ್ ಗಿಲ್, ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ನಲ್ಲಿ ತನ್ನನ್ನು ತಾನು "ಮೈಕ್" ಎಂದು ಹೇಳಿಕೊಂಡು ಮಹಿಳೆಯೊಂದಿಗೆ ಚಾಟ್ ಮಾಡಿದ್ದ, ಅಲ್ಲದೆ ಸ್ಟಿರ್ಲಿಂಗ್ನಲ್ಲಿರುವ ಹೋಟೆಲ್ಗೆ ಆಹ್ವಾನಿಸಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ
ಈ ಘಟನೆಯು 2018 ರಲ್ಲಿ ನಡೆದಿದೆ ಎನ್ನಲಾಗಿದೆ. ಸಂತ್ರಸ್ತೆಯು ವಿದ್ಯಾರ್ಥಿ ನರ್ಸ್ ಎಂದು ಹೇಳಲಾಗಿದೆ. ಮನೇಶ್ ಗಿಲ್ ನ್ನು ಲೈಂಗಿಕ ಅಪರಾಧಿಗಳ ಪಟ್ಟಿ ಸೇರಿಸಲಾಗಿದೆ.