ಉಕ್ರೆನ್, ಜೂ 17 (DaijiworldNews/HR): ರಷ್ಯನ್ನರಿಗೆ ಉಕ್ರೇನ್ನಲ್ಲಿ ವೀಸಾ ಮುಕ್ತ ಪ್ರವೇಶ ಜುಲೈ 1ರಿಂದ ರದ್ದುಗೊಳಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಕ್ಯಾಬಿನೆಟ್ ಆಫ್ ಮಿನಿಸ್ಟರ್ಸ್ ಯೋಜಿಸಿರುವ ನಿರ್ಧಾರದ ಪ್ರಕಾರ, ಉಕ್ರೇನ್ ಜುಲೈ 1, 2022 ರಿಂದ ರಷ್ಯಾದ ನಾಗರಿಕರಿಗೆ ವೀಸಾ ಆಡಳಿತವನ್ನು ಪರಿಚಯಿಸಲಿದೆ ಎಂದಿದ್ದಾರೆ,
ಇನ್ನು ಈ ನಿರ್ಧಾರದಿಂದಾಗಿ ರಷ್ಯನ್ನರು ಜುಲೈ 1ರಿಂದ ವೀಸಾ ಇಲ್ಲದೆ ಉಕ್ರೇನ್ ಪ್ರವೇಶಿಸುವಂತಿಲ್ಲ ಎನ್ನಲಾಗಿದೆ.