ಕಾಬೂಲ್, ಜೂ 19 (DaijiworldNews/DB): ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಗುರುದ್ವಾರದ ಬಳಿ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ.
ಪ್ರವಾದಿ ಮಹಮ್ಮದ್ಗೆ ಮಾಡಲಾದ ಅವಮಾನಕ್ಕೆ ಪ್ರತೀಕಾರವಾಗಿ ಗುರುದ್ವಾರದ ಮೇಲೆ ದಾಳಿ ಮಾಡಲಾಗಿದೆ ಎಂದು ಈ ಸಂಘಟನೆಯ ಸ್ಥಳೀಯ ಅಂಗ ಸಂಸ್ಥೆಯು ತನ್ನ ಟೆಲಿಗ್ರಾಮ್ ಚಾನೆಲ್ನಲ್ಲಿ ಹೇಳಿದೆ. ಅಲ್ಲದೆ ಹಿಂದೂಗಳು ಮತ್ತು ಸಿಖ್ಖರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದಿದೆ.
ಕಾಬೂಲ್ನ ಗುರುದ್ವಾರ ಕರ್ತೆ ಪರ್ವಾನ್ನಲ್ಲಿ ಶನಿವಾರ ಸ್ಪೋಟ ಮತ್ತು ಗುಂಡಿನ ದಾಳಿ ನಡೆದಿತ್ತು. 30 ಮಂದಿ ಸಿಖ್ ಸಮುದಾಯದವರು ಈ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಷ್ಟರಲ್ಲಿ ಒಳನುಗ್ಗಿದ್ದ ಭಯೋತ್ಪಾದಕರು ಸ್ಪೋಟ ನಡೆಸಿದ್ದರು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ನಾಲ್ಕಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು.