ಪ್ಯಾರಿಸ್, ಜೂ 20 (DaijiworldNews/MS): ಪ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಸಂಸದೀಯ ಬಹುಮತವನ್ನು ಕಳೆದುಕೊಂಡಿದ್ದು, ಸದ್ಯ ಪರಿಸ್ಥಿತಿಯಲ್ಲಿ ಫ್ರಾನ್ಸ್ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸ್ಥಿತಿ ಎದುರಾಗಿದೆ.
ಅಧ್ಯಕ್ಷ ಮ್ಯಾಕ್ರಾನ್ ಅಧ್ಯಕ್ಷರಾಗಿ ಮುಂದುವರೆಯಬೇಕಾದರೆ ಮಿತ್ರಪಕ್ಷಗಳು ಹಾಗೂ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸರ್ಕಾರ ಮುಂದುವರಿಯುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಮ್ಯಾಕ್ರಾನ್ ನೇತೃತ್ವದ ಕೇಂದ್ರೀಯ ಎನ್ಸೆಂಬಲ್ ಒಕ್ಕೂಟ ಬಹುಮತ ಪಡೆಯುವ ನಿರೀಕ್ಷೆ ಇತ್ತು. ಆದರೆ ಭಾನುವಾರ ನಡೆದ ಚುನಾವಣೆಯಲ್ಲಿ ಅಂತಿಮ ಹಂತದಲ್ಲಿ ಬಹುಮತಕ್ಕೆ ಅಗತ್ಯವಿದ್ದ 289 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ.
44 ವರ್ಷದ ಮ್ಯಾಕ್ರನ್ ಅವರು ತಮ್ಮ ಎರಡನೇ ಅವಧಿಗೆ ತೆರಿಗೆ ಕಡಿತ, ಕಲ್ಯಾಣ ಸುಧಾರಣೆ ಮತ್ತು ಈಗ ಪ್ರಶ್ನೆಯಲ್ಲಿರುವ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದೊಂದಿಗೆ ಮುದ್ರೆಯೊತ್ತಲು ಆಶಿಸಿದ್ದರು.