ವಾಷಿಂಗ್ಟನ್, ಜ 01(DaijiworldNews/HR): ಯುಎಸ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಸುಪ್ರೀ ಕೋರ್ಟ್ನಲ್ಲಿ ಸೇವೆ ಸಲ್ಲಿಸಿದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಸ್ಟಿಸ್ ಕೇತಾಂಜಿ ಬ್ರೌನ್ ಜಾಕ್ಸನ್( 51) ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ದೃಢೀಕರಿಲಾಗಿದ್ದು, ಸೆನೆಟ್ ಅವರ ನಾಮನಿರ್ದೇಶನದಲ್ಲಿ 5 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.
ಇನ್ನು ನಿನ್ನೆ ಜಸ್ಟೀಸ್ ಜಾಕ್ಸನ್ ಅವರು ಸಾಂವಿಧಾನಿಕ ಪ್ರಮಾಣ ವಚನ ಸ್ವೀಕರಿಸಿದ್ದು, ಜಸ್ಟೀಸ್ ಜಾಕ್ಸನ್ ಅವರು ರಾಷ್ಟ್ರದ 116 ನೇ ನ್ಯಾಯಮೂರ್ತಿ ಮತ್ತು ಅತ್ಯುನ್ನತ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಆರನೇ ಮಹಿಳೆಯಾಗಿದ್ದಾರೆ.