ಓಕ್ಸಾಕಾ, ಜು 03 (DaijiworldNews/DB): ಸಂಪ್ರದಾಯದಂತೆ ಇಲ್ಲೊಬ್ಬ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾನೆ. ಅಲ್ಲದೆ, ಮೊಸಳೆಗೆ ಚುಂಬನವನ್ನೂ ನೀಡಿದ್ದಾನೆ. ಮೊಸಳೆಯ ಬಾಯಿಯನ್ನು ಕಟ್ಟಿ ಹಾಕಲಾಗಿತ್ತು ಎಂಬುದು ಗಮನಿಸಬೇಕಾದ ಅಂಶ.
ಈ ಮದುವೆ ನಡೆದಿರುವುದು ಮೆಕ್ಸಿಕೋದ ಓಕ್ಸಾಕ ಎಂಬ ನಗರದಲ್ಲಿ. ಓಕ್ಸಾಕವು ಸಣ್ಣ ಮೀನುಗಾರಿಕಾ ವೃತ್ತಿ ಇರುವ ಹಳ್ಳಿ. ಇಲ್ಲಿ ಮೊಸಳೆಯೊಂದಿಗೆ ಮದುವೆಯಾಗುವುದು ತಲೆಮಾರಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಸಂಪ್ರದಾಯ ಪಾಲನೆಯ ಭಾಗವಾಗಿ ಸ್ಯಾನ್ ಪೆಡ್ರೊ ಹುಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೋಗೋ ಸೋಸಾ ಎಂಬಾತನೇ ಮೊಸಳೆಯನ ನು ಮದುವೆಯಾದ ಮೇಯರ್. ಇಲ್ಲಿನ ಚೊಂಟಾಲ್ ಮತ್ತು ಹುವಾವ್ ಸಮುದಾಯಗಳಲ್ಲಿ ಹಿಸ್ಪಾನಿಕ್ ಕಾಲದಿಂದಲೇ ಮೊಸಳೆಯೊಂದಿಗೆ ವಿವಾಹವಾಯವ ಪದ್ದತಿ ಇದೆ.
ಮೊಸಳೆಯನ್ನು ಬಿಳಿ ಅಥವಾ ಇತರ ಬಣ್ಣದ ಧಿರಿಸಿನಲ್ಲಿ ಮದುವಣಗಿತ್ತಿಯಂತೆ ಸಿಂಗರಿಸಿ ಮದುವೆಯಾಗುವುದು ಸಂಪ್ರದಾಯ. ಇದು ಭೂಮಿ ತಾಯಿಯನ್ನು ಪ್ರತಿನಿಧಿಸುವ ದೇವತೆಗೆ ಸಮ ಎಂದು ನಂಬಲಾಗಿದೆ. ಮಾನವರು ದೈವಿಕವಾಗಿ ಸೇರುವುದನ್ನು ಇದು ಸಾಂಕೇತಿಸುತ್ತದೆ ಎಂದೂ ಹೇಳಲಾಗುತ್ತಿದೆ.