ಬ್ರಿಟನ್, ಜು 06 (DaijiworldNews/MS): ಇನ್ನ್ಫೋಸಿಸ್ ನಾರಾಯಣಮೂರ್ತಿ ಅಳಿಯ ಬ್ರಿಟನ್ ಹಣಕಾಸು ಖಾತೆ ಸಚಿವ ರಿಷಿ ಸುನಾಕ್ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇವರೊಂದಿಗೆ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಒತ್ತಡಕ್ಕೆ ಸಿಲುಕಿದ್ದು, ಸರ್ಕಾರ ಪತನದ ಅಂಚಿಗೆ ಸಿಲುಕಿದೆ.
ರಿಷಿ ಸುನಾಕ್ ರಾಜೀನಾಮೆ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, " ಸರ್ಕಾರವು ಸರಿಯಾಗಿ, ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಯಬೇಕೆಂದು ಜನರು ನಿರೀಕ್ಷಿಸುತ್ತಾರೆ. ಇದು ನನ್ನ ಕೊನೆಯ ಸರ್ಕಾರಿ ಹುದ್ದೆ ಎಂದು ಹೇಳಲು ಬಯಸುತ್ತೇನೆ. ನನ್ನ ಹೋರಾಟಕ್ಕೆ ಇದು ಮಾನದಂಡವಾಗಲಿದೆ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಪ್ರಧಾನಿಗೆ ಬರೆದ ನನ್ನ ಪತ್ರ ಕೆಳಗಿದೆ" ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಅಮಾನತುಗೊಂಡಿರುವ ಸಂಸದ ಕ್ರಿಸ್ ಪಿಂಚರ್ ವಿರುದ್ಧ ಡೌನಿಂಗ್ ಸ್ಟ್ರೀಟ್ನ ಆರೋಪಗಳ ನಿರ್ವಹಣೆ ಬಗ್ಗೆ ಮಾಜಿ ನಾಗರಿಕ ಸೇವಕರು ಮಾತನಾಡಿದ ನಂತರ ಹೆಚ್ಚಿನ ರಾಜಕೀಯ ಪ್ರಹಸನ ನಡೆಯುತ್ತಿದೆ.
ರಿಷಿ ಸುನಾಕ್ 2015ರಲ್ಲಿ ಬ್ರಿಟನ್ ಸಂಸತ್ತನ್ನು ಪ್ರವೇಶಿಸಿದ್ದು, ಆ ಬಳಿಕ 2020ರಲ್ಲಿ, ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವ ಹುದ್ದೆಗೇರಿದರು. ಈ ಹುದ್ದೆಗೇರಿದ ಭಾರತ ಮೂಲದ ಪ್ರಥಮ ವ್ಯಕ್ತಿ ರಿಷಿಯಾಗಿದ್ದಾರೆ.