ನವದೆಹಲಿ, ಜು 07 (DaijiworldNews/HR): ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಬೋರಿಸ್ ಜಾನ್ಸನ್ ಮೂರು ವರ್ಷಗಳ ಬಳಿಕ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೋರಿಸ್ ಜಾನ್ಸನ್, "ನನ್ನ ಸಾಧನೆಗಳ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ, ಹೊಸ ನಾಯಕನ ಸ್ಥಾನದವರೆಗೆ ನಾನು ಮುಂದುವರಿಯುತ್ತೇನೆ ಎಂದಿದ್ದಾರೆ.
ಇನ್ನು 40ಕ್ಕೂ ಹೆಚ್ಚು ಮಂತ್ರಿಗಳು ತಮ್ಮ ಸರ್ಕಾರವನ್ನು ತ್ಯಜಿಸಿ ಹೋಗುವಂತೆ ಆದೇಶಿಸಿದಾಗ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.