ಟೋಕಿಯೋ, ಜು 08 (DaijiworldNews/MS): ಪ್ರಚಾರ ಭಾಷಣದ ವೇಳೆ ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಕುಸಿದು ಬಿದ್ದ ಘಟನೆ ನಾರಾ ನಗರದಲ್ಲಿ ನಡೆದಿದೆ.
ಈ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ವರದಿಯಾಗಿದೆ. ಆದರೆ ಅಬೆ ಅವರ ಮೇಲೆ ದಾಳಿಯಾಗಿರುವ ಪ್ರಮುಖ ಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಕುಸಿದು ಬಿದ್ದ ಅಬೆ ಅವರನ್ನು ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ರವಾನಿಸಲಾಗಿದೆ.
ಜಪಾನಿನ ಮಾಧ್ಯಮದ ಪ್ರಕಾರ, ಶುಕ್ರವಾರ ನಾರಾದ ಬೀದಿಯಲ್ಲಿ ಭಾಷಣ ಮಾಡುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ದಾಳಿ ನಡೆಸಿದ ಬಳಿಕ ಕುಸಿದುಬಿದ್ದಿದ್ದಾರೆ. ಅಲ್ಲಿ ಹಾಜರಿದ್ದ ವರದಿಗಾರನಿಗೆ ಅಬೆ ರಕ್ತಸ್ರಾವವಾಗುತ್ತಿರುವುದನ್ನು ಮತ್ತು "ಗುಂಡೇಟಿನಂತೆ ಏನೋ ಕೇಳಿಸಿತು" ಎಂದು ವರದಿಯಾಗಿದೆ.
ಆದರೆ ಅಲ್ಲಿನ ಸ್ಥಳೀಯ ಅಗ್ನಿಶಾಮಕ ಇಲಾಖೆ ಪ್ರಕಾರ "ಮಾಜಿ ಪ್ರಧಾನಿ ಅಬೆ ಅವರು ಹೃದಯಾಘಾತಕ್ಕೆ ಒಳಗಾದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ಇಲ್ಲ
ಜಪಾನ್ನಲ್ಲಿ ಪ್ರಧಾನಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಕೀರ್ತಿ ಶಿಂಜೊ ಅಬೆ ಅವರಿಗೆ ಸಲ್ಲುತ್ತದೆ. ಆಗಸ್ಟ್ 2020 ರಲ್ಲಿಅನಾರೋಗ್ಯದ ಕಾರಣದಿಂದ ಪ್ರಧಾನಿ ಸ್ಥಾನದಿಂದ ಕೆಳಕ್ಕಿಳಿದಿದ್ದರು.