ಟೋಕಿಯೋ,ಜು 08 (DaijiworldNews/MS): ಪ್ರಚಾರ ಭಾಷಣದ ವೇಳೆ ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡೇಟಿನ ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ವ್ಯಕ್ತಿಯನ್ನು 41 ರ ಹರೆಯದ ತೆತ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ.
ಗುಂಡೇಟಿನ ದಾಳಿ ನಡೆದಾದ ಶಿಂಜೋ ಅಬೆಯ ಹಿಂದೆ 10 ಅಡಿ ದೂರದಲ್ಲಿ ಹಿಂದೆ ನಿಂತಿದ್ದಾನೆ ಎಂದು ವರದಿಯಾಗಿದೆ.
ದಾಳಿಯಿಂದಶಿಂಜೋ ಅಬೆ ಭಾಷಣದ ಮಧ್ಯೆಯೇ ವೇದಿಕೆಯ ಮೇಲೆ ಕುಸಿದು ಬಿದ್ದರು. ತಕ್ಷಣ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಅಬೆ ಅವರ ಹೃದಯ ವೈಫಲ್ಯಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ
ಜಪಾನ್ನಲ್ಲಿ ಪ್ರಧಾನಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಕೀರ್ತಿ ಶಿಂಜೊ ಅಬೆ ಅವರಿಗೆ ಸಲ್ಲುತ್ತದೆ. ಆಗಸ್ಟ್ 2020 ರಲ್ಲಿಅನಾರೋಗ್ಯದ ಕಾರಣದಿಂದ ಪ್ರಧಾನಿ ಸ್ಥಾನದಿಂದ ಕೆಳಕ್ಕಿಳಿದಿದ್ದರು.