ಸ್ಯಾನ್ ಫ್ರಾನ್ಸಿಸ್ಕೊ, ಜು 09 (DaijiworldNews/MS): ಉದ್ಯಮಿ ಎಲೋನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್ಯನ್ನು ಖರೀದಿಸುವ ಒಪ್ಪಂದವನ್ನು ಕೊನೆಗೊಳಿಸುತ್ತಿರುವುದಾಗಿ ಶುಕ್ರವಾರ ಹೇಳಿದ್ದಾರೆ.
ಸ್ಪ್ಯಾಮ್ ಖಾತೆಗಳ ಸಾಕಷ್ಟು ಕುರಿತ ಮಾಹಿತಿ(ಡೇಟಾ)ಯನ್ನು ಟ್ವಿಟರ್ ನೀಡಲು ವಿಫಲವಾಗಿದ್ದು, ಹೀಗಾಗಿ 44 ಶತಕೋಟಿ ಡಾಲರ್ಗೆ (₹3.49 ಲಕ್ಷ ಕೋಟಿ) ಖರೀದಿಸುವ ಒಪ್ಪಂದ ಮುರಿದುಬಿದ್ದಿದೆ ಎಂದು ಮಸ್ಕ್ ಹೇಳಿದ್ದಾರೆ.
" ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ ಅಥವಾ ಮಾಹಿತಿಯನ್ನು ಒದಗಿಸಲಿಲ್ಲ. ಕೆಲವೊಮ್ಮೆ ಟ್ವಿಟ್ಟರ್, ಎಲಾನ್ ಮಸ್ಕ್ ಅವರ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥನೀಯವೆಂದು ತೋರುವ ಕಾರಣಗಳಿಗಾಗಿ ಅದನ್ನು ತಿರಸ್ಕರಿಸಿದೆ ಈ ಎಲ್ಲಾ ಕಾರಣಗಳಿಗೆ ಈ ಒಪ್ಪಂದ ಮುರಿದುಬಿದ್ದಿದೆ" ಎಂದು ಮಸ್ಕ್ ಹೇಳಿದ್ದಾರೆ.
ಮಸ್ಕ್ ಟ್ವಿಟರ್ ಖರೀದಿಯನ್ನು ರದ್ದು ಮಾಡಿದ ಬೆನ್ನಲ್ಲಿಯೇ, ಎಲಾನ್ ಮಸ್ಕ್ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್ ಆಡಳಿತ ಮಂಡಳಿ ತಿಳಿಸಿದದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಅತಿದೊಡ್ಡ ಟ್ವಿಸ್ಟ್ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ನಡುವೆ ಮುಂದೆ ನಡೆಯಬಹುದಾದ ಬಹುದೊಡ್ಡ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ.