ಕೋಲಂಬೋ, ಜು 09 (DaijiworldNews/HR): ಶ್ರೀಲಂಕಾದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ಕೊಲಂಬೊದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗೋಟಾಬಯ ರಾಜಪಕ್ಸೆ ಅವರ ಮನೆಯ ಸುತ್ತಲೂ ಪ್ರತಿಭಟನಾಕಾರರು ಜಮಾಯಿಸಿದ್ದು, ಹೀಗಾಗಿ ಅವರನ್ನು ಸುರಕ್ಷತಾ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ರಾಜಪಕ್ಸೆ ಅವರ ಹುದ್ದೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದು, ಪ್ರತಿಭಟನಾಕಾರರ ನಿಯಂತ್ರಣಕ್ಕೆ ಕರ್ಫ್ಯೂ ವಿಧಿಸಲಾಗಿತ್ತು. ಆದರೆ ಕರ್ಫ್ಯೂ ಹಿಂತೆಗೆದುಕೊಂಡ ನಂತರ ಪ್ರತಿಭಟನಾಕಾರರು ಶನಿವಾರ ಕೊಲಂಬೊದಲ್ಲಿ ಮೆಗಾ ರ್ಯಾಲಿ ನಡೆಸಿದ್ದಾರೆ.