ನಾಸಾ, ಜು 12 (DaijiworldNews/MS): ಆಧುನಿಕ ಖಗೋಳಶಾಸ್ತ್ರದ ಅತ್ಯಂತ ಪರಿಣಾಮಕಾರಿ ಬಾಹ್ಯಾಕಾಶ ದೂರದರ್ಶಕ ಯಂತ್ರ ಎಂದೇ ಪರಿಗಣಿಸಲಾಗಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ತೆಗೆದ ಬ್ರಹ್ಮಾಂಡದ ಸೌಂದರ್ಯ ಚಿತ್ರವನ್ನು ನಾಸಾ ಜು.12 ರಂದು ಅನಾವರಣಗೊಳಿಸಿದೆ.
ಜಗತ್ತಿನ ಖಗೋಳಪ್ರಿಯರು ಕುತೂಹಲದಿಂದ ಕಾಯುತ್ತಿರುವ ಬಾಹ್ಯಾಕಾಶ ಚಿತ್ರವನ್ನು, ಅತಂತ್ಯ ದೂರದವರೆಗೆ ತಲುಪಬಲ್ಲ ಶಕ್ತಿಶಾಲಿ ದೂರದರ್ಶಕವಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸೆರೆಹಿಡಿದು ಭೂಮಿಗೆ ರವಾನಿಸಿದೆ. ಗ್ರಹಗಳು, ನಕ್ಷತ್ರ ಪುಂಜಗಳು, ಹಲವಾರು ಸೌರ ಮಂಡಲಗಳ ಕ್ಷೀರಪಥಗಳು ಖಗೋಳಪ್ರಿಯರ ಮನತಣಿಸಲಿದೆ.
ಇದು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೊದಲ ಚಿತ್ರವಾಗಿದ್ದು, ಇದರಲ್ಲಿ ನಕ್ಷತ್ರ ಸಮೂಹಗಳು ಮತ್ತು ಪ್ರಸರಣ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಬ್ರಹ್ಮಾಂಡದಲ್ಲಿ ಹಿಂದೆಂದೂ ನೋಡಿರದ ಸಣ್ಣ, ಮಸುಕಾದ ರಚನೆ ಕಾಣಾಸಿಕ್ಕಿದ್ದು, ಗ್ಯಾಲಕ್ಸಿಗಳ ದ್ರವ್ಯರಾಶಿಗಳ, ವಯಸ್ಸುಗಳು, ಇತಿಹಾಸಗಳು ಮತ್ತು ಸಂಯೋಜನೆಗಳ ಬಗ್ಗೆ ಸಂಶೋಧಕರು ಶೀಘ್ರದಲ್ಲೇ ಅಧ್ಯಯನ ಆರಂಭಿಸಲಿದ್ದಾರೆ.
ಈ ಚಿತ್ರವು ದೂರದರ್ಶಕದ ಮೊದಲ ಪೂರ್ಣ ಬಣ್ಣದ ಚಿತ್ರಗಳಲ್ಲಿ ಒಂದಾಗಿದೆ.