ವಾಷಿಂಗ್ಟನ್, ಜು 12 (DaijiworldNews/HR): ಸಾಮಾಜಿಕ ಜಾಲತಾಣದಲ್ಲಿ ಬೇರೆಯವರಿಗಿಂತ ಸುಂದರವಾಗಿ ಕಾಣಲು ಜನರು ಏನು ಮಾಡಲೂ ಸಿದ್ಧರಿದ್ದು, ಯುವಜನತೆಯು ಕಾಸ್ಮೆಟಿಕ್ ಸರ್ಜರಿ ಹಾಗೂ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಿದ್ದು, ನಟಿ ಕಿಮ್ ಕಾರ್ಡಶಿಯಾನ್ ನಂತೆ ಕಾಣಬೇಕೆಂದು ಶಸ್ತ್ರಚಿಕಿತ್ಸೆ ಮಾಡಿಕೊಂಡ ಮಾಡೆಲ್ ಈಗ ಆಕೆಯ ಲುಕ್ ನನಗೆ ಬೇಡ, ತಾನು ಮೊದಲಿನಂತೆಯೇ ಕಾಣಬೇಕು ಎಂದು ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ.
29 ವರ್ಷದ ಬ್ರೆಜಿಲಿಯನ್ ಮಾಡೆಲ್ ಜೆನ್ನಿಫರ್ ಪ್ಯಾಂಪ್ಲೋನಾ ತನ್ನನ್ನು ಕಿಮ್ ಕಾರ್ಡಶಿಯಾನ್ ಅವಳಂತೆ ಕಾಣಬೇಕು ಎಂದುಕಳೆದ 12 ವರ್ಷಗಳ ಅವಧಿಯಲ್ಲಿ 40 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ.
ನಟಿ ಕಿಮ್ ಕಾರ್ಡಶಿಯಾನ್ ನಂತೆ ಕಾಣಬೇಕೆಂದು ಸುಮಾರು 600 ಸಾವಿರ ಡಾಲರ್ ಖರ್ಚು ಮಾಡಿರುವ ಜೆನ್ನಿಫರ್ ಪ್ಯಾಂಪ್ಲೋನಾ, ಇದೀಗ ತಾನು ಮೊದಲಿನಂತೆಯೇ ಕಾಣಬೇಕು ಎಂದು 120 ಸಾವಿರ ಡಾಲರ್ ಖರ್ಚು ಮಾಡುತ್ತಿದ್ದಾಳೆ.
ಇನ್ನು ಜನರು ನನ್ನನ್ನು ಕಾರ್ಡಶಿಯನ್ ಎಂದು ಕರೆಯುತ್ತಾರೆ ಮತ್ತು ಅದು ಕಿರಿಕಿರಿಯಾಗುತ್ತಿದೆ. ನಾನು ಈ ಎಲ್ಲಾ ಕೆಲಸಗಳನ್ನು ಮಾಡಿದ್ದು, ನನ್ನ ವೈಯಕ್ತಿಕ ಜೀವನಲ್ಲೂ ನಾನು ಸಾಧನೆಗಳನ್ನು ಮಾಡಿದ್ದೇನೆ., ಆದರೆ ನಾನು ಕಾರ್ಡಶಿಯನ್ನಂತೆ ಕಾಣುತ್ತಿದ್ದರಿಂದ ಮಾತ್ರ ನನ್ನನ್ನು ಗುರುತಿಸಲಾಗುತ್ತಿದೆ ಆದ್ದರಿಂದ ನಾನು ಮೊದಲಿನಂತೆಯೇ ಕಾಣಬೇಕೆಂದು ನಿರ್ಧರಿಸಿದೆ ಎಂದು ಜೆನ್ನಿಫರ್ ಪ್ಯಾಂಪ್ಲೋನಾ ಹೇಳಿದ್ದಾಳೆ.
ಜೆನ್ನಿಫರ್ ಪ್ಯಾಂಪ್ಲೋನಾ ನಿತಂಬ ದುಂಡಗಾಗಿಸಲು ಕೊಬ್ಬಿನ ಚುಚ್ಚುಮದ್ದು ಸೇರಿದಂತೆ ಮೂರು ರೈನೋಪ್ಲ್ಯಾಸ್ಟಿಗಳು ಮತ್ತು ಎಂಟು ಆಪರೇಷನ್ಗಳನ್ನು ಕೂಡ ಮಾಡಿಸಿಕೊಂಡಿದ್ದಾಳೆ.