ಕೊಲೊಂಬೋ , ಜು 12 (DaijiworldNews/MS): ಗೊಟಾಬಯ ರಾಜಪಕ್ಸೆ ಅವರು ರಾಜೀನಾಮೆಯಿಂದ ತೆರವಾಗಿರುವ ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಸ್ಥರ್ಧಿಸಲು ಸಿದ್ದ ಎಂದು ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷ ಸಮಗಿ ಜನ ಬಲವೇಗಯಾ ತನ್ನ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಿದ ನಂತರ ತಮ್ಮ ಪಕ್ಷವು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಮಟ್ಟದಲ್ಲಿ ದೇಶವನ್ನು ಮುನ್ನಡೆಸಲು ಸಿದ್ಧವಿದೆ ಎಂದು ಸಜಿತ್ ಪ್ರೇಮದಾಸ್ ಹೇಳಿದ್ದಾರೆ.
ಶ್ರೀಲಂಕಾ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಮಾರ್ಚ್ನಿಂದ ಸಾವಿರಾರು ಜನರನ್ನು ಬೀದಿಗೆ ತಂದು ನಿಲ್ಲಿಸಿದೆ.
ನಗದು ಕೊರತೆ, ಆಹಾರ, ಇಂಧನ ಮತ್ತು ಔಷಧದಂತಹ ಮೂಲಭೂತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ದ್ವೀಪ ರಾಷ್ಟ್ರ ಹೆಣಗಾಡುತ್ತಿದೆ.
ಶ್ರೀಲಂಕಾ ಸ್ಪೀಕರ್ ಜುಲೈ 20 ರಂದು ಮುಂದಿನ ಅಧ್ಯಕ್ಷರನ್ನು ಅಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ಪ್ರೇಮದಾಸ ಅವರು ಬಿಬಿಸಿಗೆ ಪ್ರತಿಕ್ರಿಯಿಸಿದ್ದಾರೆ.