ಬ್ರಿಟನ್, ಜು 14 (DaijiworldNews/MS): ಇಂಗ್ಲೆಂಡಿನ ಮಾಜಿ ಚಾನ್ಸೆಲರ್ , ಇನ್ಪೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಳಿಯ, ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ರೇಸ್ ನಲ್ಲಿದ್ದಾರೆ. ಬ್ರಿಟನ್ನ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷ ನಡೆಸಿದ ಮೊದಲ ಹಂತದ ಚುನಾವಣೆಯಲ್ಲಿ 88 ಸಂಸದರ ಬೆಂಬಲ ಪಡೆದಿದ್ದಾರೆ.
ಸುನಕ್ ನಂತರದ ಸ್ಥಾನದಲ್ಲಿ ವಾಣಿಜ್ಯ ಸಚಿವ ಶೆನ್ನಿ ಮೊರ್ಡಾಂಟ್ 67 ಮತಗಳನ್ನು ಪಡೆದರು. ಭಾರತೀಯ ಮೂಲದ ಅಟಾರ್ನಿ ಜನರಲ್ ಯುಯೆಲಾ ಬ್ರಾವರ್ಮನ್ 32 ಮತಗಳೊಂದಿಗೆ ಕೊನೆಯ ಸ್ಥಾನ ಪಡೆದರು.
ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ 20 ಸಂಸದರ ಬೆಂಬಲ ಅಗತ್ಯವಿದ್ದು, ಅಷ್ಟು ಸಂಸದರು ಬೆಂಬಲ ಸೂಚಿಸಿದರೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯುತ್ತಾರೆ. ಇನ್ನು ಎರಡನೇ ಸುತ್ತು ಪ್ರವೇಶಿಸಬೇಕಾದರೆ 30 ಸಂಸದರ ಬೆಂಬಲ ಸಿಗಬೇಕು.
ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಬದಲಿಗೆ ನೇಮಕಗೊಳ್ಳುವ ಪ್ರಧಾನಿ ಹುದ್ದೆಯ 8 ಆಕಾಂಕ್ಷಿಗಳಲ್ಲಿ ರಿಷಿ ಸುನಕ್ ಪ್ರಮುಖರಾಗಿದ್ದಾರೆ.