ಒಟ್ಟಾವಾ, ಜು 15 (DaijiowrldNews/HR): 1985 ರ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ 331 ಜನರ ಸಾವಿಗೆ ಕಾರಣವಾದ ರಿಪುದಮನ್ ಸಿಂಗ್ ಮಲಿಕ್ನನ್ನು ಪಶ್ಚಿಮ ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.
2005 ರಲ್ಲಿ ಏರ್ ಇಂಡಿಯಾ ಸಾಮೂಹಿಕ ಹತ್ಯೆಯ ಸಂಚಿನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಮಲಿಕ್ ಖುಲಾಸೆಗೊಂಡಿದ್ದನು. ಈತ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಪ್ರದೇಶದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಗುಂಡು ಹಾರಿಸಲಾಗಿದೆ.
ಇನ್ನು ಜೂನ್ 23, 1985 ರಂದು ಮಾಂಟ್ರಿಯಲ್ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ 747 ಕನಿಷ್ಕ, ಏರ್ ಇಂಡಿಯಾ ವಿಮಾನ 182ರ ಸ್ಫೋಟದ ಮೂವರು ಪ್ರಮುಖ ಆರೋಪಿಗಳಲ್ಲಿ ಮಲಿಕ್, ಇಂದರ್ಜೀತ್ ಸಿಂಗ್ ರಿಯಾತ್ ಮತ್ತು ಅಜೈಬ್ ಸಿಂಗ್ ಬಗ್ರಿ ಇದ್ದರು. ಘಟನೆಯಲ್ಲಿ ಎಲ್ಲಾ 329 ಮಂದಿ ಸಾವನ್ನಪ್ಪಿದರು.