ವಾಷಿಂಗ್ಟನ್ ಜು 18 (DaijiworldNews/MS): ನಾಸಾದ ಮಾರ್ಸ್ ರೋವರ್ ಪರ್ಸೆವೆರೆನ್ಸ್ ಮಂಗಳ ಗ್ರಹದಿಂದ ಕಳುಹಿಸಿದ ಚಿತ್ರವೊಂದನ್ನು ಕುತೂಹಲವನ್ನುಹುಟ್ಟುಹಾಕಿದೆ.
ಅಂಗಾರಕನ ಅಂಗಳದಿಂದ ಅದ್ಭುತ ಚಿತ್ರಗಳನ್ನು ಕಳುಹಿಸುವ ಮೂಲಕ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಭೂಪ್ರದೇಶಗಳನ್ನು ನಿರ್ಧರಿಸುವ ಬಾಹ್ಯಾಕಾಶ ಸಂಸ್ಥೆಯ ಅನ್ವೇಷಣೆಯಲ್ಲಿ ನಾಸಾದ ಪರ್ಸೆವೆರೆನ್ಸ್ ರೋವರ್ ಪ್ರಮುಖ ಪಾತ್ರ ವಹಿಸಿದ್ದು ಇದು ಈಗ, ಸ್ಪಾಗೆಟ್ಟಿ' ಅಥವಾ 'ನೂಡಲ್' ಆಕಾರದಲ್ಲಿ ಮತ್ತೊಂದು ಅತ್ಯಂತ ಆಕರ್ಷಕವಾದ ಅವಶೇಷಗಳನ್ನು ಗುರುತಿಸಿದೆ.
ಮೊದಲ ನೋಟದಲ್ಲಿ ನೂಡಲ್ಸ್ ಆಕಾರದಲ್ಲಿ ಕಾಣಿಸುವ ಈ ವಸ್ತು ಖಗೋಳ ವಿಜ್ಞಾನಿಗಳ ಕುತೂಹಲವನ್ನು ಹೆಚ್ಚಿಸಿದೆ.
ರೋವರ್ನಲ್ಲಿರುವ ಮುಂಭಾಗದ ಅಪಾಯವನ್ನು ತಪ್ಪಿಸಲೆಂದು ಇರುವ ಕ್ಯಾಮೆರಾಗಳಿಂದ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ, ಆದರೆ ವಿಜ್ಞಾನಿಗಳು ವಸ್ತುವಿನ ನಿಖರವಾದ ಸ್ವರೂಪವನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಇದು ಹಿಂದಿನ ನಾಸಾ ಮಿಷನ್ನಿಂದ ಮತ್ತೊಂದು ಅವಶೇಷಗಳಾಗಿರಬಹುದು ಎಂದು ಹೆಚ್ಚಿನ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.