ಢಾಕಾ, ಜು 19 (DaijiworldNews/MS): ಬಾಂಗ್ಲಾದೇಶದಲ್ಲಿ ಫೇಸ್ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ದೇವಸ್ಥಾನ ಮತ್ತು ಹಿಂದು ಸಮುದಾಯದವರ ಮನೆ ಮೇಲಿನ ದಾಳಿ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
ಶುಕ್ರವಾರ ನರೈಲ್ನ ಲೋಹಗರ ಉಪಜಿಲಾದ ದಿಘಾಲಿಯಾ ಬಜಾರ್ ಪ್ರದೇಶದಲ್ಲಿ ದೇವಸ್ಥಾನವೊಂದರಲ್ಲಿ ದಾಂಧಲೆ ನಡೆಸಿದ್ದ ದುಷ್ಕರ್ಮಿಗಳು, ಬಳಿಕ ಹಿಂದು ಸಮುದಾಯದವರ ಮನೆ ಮತ್ತು ಅಂಗಡಿ ಮೇಲೆ ದಾಳಿ ನಡೆಸಿ, ಹಾನಿಯುಂಟುಮಾಡಿದ್ದರು. ಫೇಸ್ಬುಕ್ನಲ್ಲಿ ಮಾಡಲಾಗಿದ್ದ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಈ ದಾಂಧಲೆ ನಡೆದಿತ್ತು ಎಂದು ಬಾಂದ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಪ್ರಕರಣದ ತನಿಖಾಧಿಕಾರಿ ಮಿಜಾನೂರ್ ರೆಹಮಾನ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಏಳು ದಿನಗಳ ಬಂಧನ ನೀಡಿದೆ.
ಆರೋಪಿಗಳನ್ನ್ನು ಮಾಸುಮ್ ಬಿಲ್ಲಾ (32), ಎಂಡಿ ಸೈಯದ್ ಶೇಖ್ (25), ರೆಜಾಲ್ ಶೇಖ್ (40), ರಾಸೆಲ್ ಮೃಧಾ (38), ಮತ್ತು ಕಬೀರ್ ಗಾಜಿ (40) ಎಂದು ಗುರುತಿಸಲಾಗಿದೆ
ಈ ಘಟನೆಯಲ್ಲಿ ಇದುವರೆಗೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನರೈಲ್ ಪೊಲೀಸ್ ವರಿಷ್ಠಾಧಿಕಾರಿ ಪ್ರೊಬೀರ್ ಕುಮಾರ್ ರಾಯ್ ಈ ಹಿಂದೆ ತಿಳಿಸಿದ್ದಾರೆ.