ಬೋಸ್ಟನ್, ಜು 22(DaijiworldNews/DB): ಪ್ರಯಾಣಿಕರನ್ನು ಹೊತ್ತು ಸೇತುವೆ ಮೇಲೆ ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಬೋಸ್ಟನ್ನ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ವೆಲ್ಲಿಂಗ್ಟನ್ ಮತ್ತು ಅಸೆಂಬ್ಲಿ ನಿಲ್ದಾಣದ ನಡುವಿನ ನದಿಯ ಸೇತುವೆಯ ಮೂಲಕ ಸಂಚರಿಸುತ್ತಿದ್ದ ಆರೆಂಜ್ ಲೈನ್ ರೈಲಿನ ಹೆಡ್ ಕಾರಿನಿಂದ ಬೆಂಕಿ ಮತ್ತು ಹೊಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸಂಭಾವ್ಯ ಅಪಾಯವನ್ನು ತಪ್ಪಿಸಿಕೊಳ್ಳಲು ಹಲವು ಮಂದಿ ರೈಲಿನ ಕಿಟಕಿಗಳ ಮೂಲಕ ತಪ್ಪಿಸಿಕೊಂಡಿದ್ದು, ಮಹಿಳೆಯೋರ್ವರು ಕೆಳಗೆ ಹರಿಯುತ್ತಿರುವ ಮಿಸ್ಟಿಕ್ ನದಿಗೆ ಹಾರಿದ್ದಾರೆ. ಸುಮಾರು 200 ಮಂದಿಯನ್ನು ರೈಲಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಶೀಟ್ ಮೆಟಲ್ ಅಥವಾ ಸೈಡ್ ಪ್ಯಾನೆಲ್ ನ ಭಾಗವು ಮೂರನೇ ಹಳಿಯೊಂದಿಗೆ ತಾಗಿದ ಕಾರಣ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪ್ರಯಾಣಿಕರು ರಕ್ಷಣೆಗಾಗಿ ರೈಲಿನ ಕಿಟಕಿಗಳಿಂದ ಜಿಗಿಯುತ್ತಿರುವ ವೀಡಿಯೋಗಳು ವೈರಲ್ ಆಗಿದೆ. ಘಟನೆಯಲ್ಲಿ ಯಾವುದೇ ಹಾನಿ, ಗಾಯ ಉಂಟಾಗಿಲ್ಲ.