ಕೆನಡಾ, ಜು 26 (DaijiworldNews/DB): ಭಾರೀ ಗುಂಡಿನ ದಾಳಿಯಿಂದಾಗಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಕೆನಡಾದ ಲಾಂಗ್ಲಿ ಮತ್ತು ವ್ಯಾಂಕೋವರ್ನಲ್ಲಿ ನಡೆದಿದೆ. ಘಟನೆಯಲ್ಲಿ ಶಂಕಿತ ದಾಳಿಕೋರ ಕೂಡಾ ಸಾವನ್ನಪ್ಪಿದ್ದಾನೆ.
ಲಾಂಗ್ಲಿ ಮತ್ತು ಲಾಂಗ್ಲಿ ಟೌನ್ಶಿಪ್ನ 5 ಸ್ಥಳಗಳಲ್ಲಿ ದಾಳಿ ನಡೆದಿದೆ. ನಿರಾಶ್ರಿತರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ ಪೊಲೀಸರು ಇದನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ. ಗುಂಡಿನ ದಾಳಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಾರಣ ಪತ್ತೆ ಹಚ್ಚಲಾಗುತ್ತಿದೆ ಎಂದು ಲಾಂಗ್ಲಿ ಪೊಲೀಸ್ ಮುಖ್ಯಸ್ಥ ಗಾಲಿಬ್ ಭಯಾನಿ ತಿಳಿಸಿರುವುದಾಗಿ ವರದಿಯಾಗಿದೆ.
ಹಿಂಸಾಚಾರದಲ್ಲಿ ಮೃತಪಟ್ಟವರು ನಿರಾಶ್ರಿತರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಇವರು ನಿರಾಶ್ರಿತರರೇ, ಇವರ ನಡುವೆ ಏನಾದರೂ ಸಂಪರ್ಕವಿತ್ತೇ ಎಂಬ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ರಾಯಲ್ ಕೆನಡಿಯನ್ ಮೌಟೇನ್ ಪೊಲೀಸ್ ವಕ್ತಾರ ಸಾರ್ಜೆಂಟ್ ರೆಬೆಕಾ ಪಾಸ್ರ್ಲೋ ತಿಳಿಸಿರುವುದಾಗಿ ವರದಿ ಹೇಳಿದೆ.